ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದೂಕಿನಿಂದ ಸಿಡಿಮದ್ದು: ನಳಿನ್‌ಕುಮಾರ್‌ ಸಮರ್ಥನೆ

Last Updated 21 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ಕಲಬುರ್ಗಿ: ‘ಯಾದಗಿರಿ ಜಿಲ್ಲೆಯ ಯರಗೋಳದಲ್ಲಿ ಈಚೆಗೆ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಅಭಿಮಾನಿಗಳು ಬಂದೂಕಿನಿಂದ ಸಿಡಿಮದ್ದು ಸಿಡಿಸಿದ್ದು ಅಪರಾಧವೇನಲ್ಲ. ಸಂಭ್ರಮದ ಸಮಾರಂಭಗಳಲ್ಲಿ ಈ ಪದ್ಧತಿ ಹಿಂದಿನಿಂದಲೂ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸಮರ್ಥಿಸಿಕೊಂಡರು.‌

‘ಕೇಂದ್ರ ಸಚಿವ ಭಗವಂತ ಖೂಬಾ ಅವರು ಜನಾಶೀರ್ವಾದ ಯಾತ್ರೆಯಲ್ಲಿ ಅಲ್ಲಿಗೆ ಹೋದಾಗ ಅವರ ಅಭಿಮಾನಿಗಳು ಸಿಡಿಮದ್ದು ಸಿಡಿಸಿದ್ದಾರೆ. ಆದರೆ, ಬಂದೂಕಿನಲ್ಲಿ ಗುಂಡು ಇರಲಿಲ್ಲ. ಶುಭ ಸಮಾರಂಭ ನಡೆದಾಗ ಅಥವಾ ಯಾರಾದರೂ ಮೃತಪಟ್ಟಾಗ ಈ ರೀತಿ ಮದ್ದು ಸಿಡಿಸುವ ಪದ್ಧತಿ ಕೊಡಗು ಜಿಲ್ಲೆಯಲ್ಲೂ ಇದೆ. ಅದೇ ರೀತಿಯ ಖುಷಿಯನ್ನು ಇಲ್ಲಿ ವ್ಯಕ್ತಪಡಿಸಲಾಗಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆದರೂ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿ ಬರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT