ಸೋಮವಾರ, ಸೆಪ್ಟೆಂಬರ್ 20, 2021
20 °C

ಬಿಎಸ್‌ವೈ ರಾಜೀನಾಮೆ ಹಿಂದೆ ನಳಿನ್ ಮತ್ತು ಸಿಟಿ ರವಿ ಕೈವಾಡವಿದೆ: ಕಾಂಗ್ರೆಸ್ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರ ಹಿಂದೆ ಬಿಜೆಪಿ ಮುಖಂಡರಾದ ನಳಿನ್ ಕುಮಾರ್ ಕಟೀಲ್ ಹಾಗೂ ಸಿ.ಟಿ ರವಿ ಅವರ ಕೈವಾಡವಿದೆ‘ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಆರೋಪಿಸಿದೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನದಲ್ಲಿ ಯಶಸ್ವಿಯಾದ
ಸಿಟಿ ರವಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು‘ ಎಂದಿದೆ.

‘ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ! ಯಶಸ್ವಿಯಾಗಿ ಅವಧಿ ಪೂರೈಸುತ್ತೇನೆ ಎನ್ನುತ್ತಿದ್ದವರನ್ನು ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ಕಣ್ಣೀರು ಸುರಿಸುತ್ತಾ ಇಳಿದು ಹೋಗುವಂತೆ ಮಾಡಿದಿರಿ! ಎಂದು ಸಿಟಿ ರವಿ ಹಾಗೂ ನಳಿನ್ ಅವರನ್ನು ಉದ್ದೇಶಿಸಿ ಕಾಲೆಳದಿದೆ.

‘ಮೊನ್ನೆ ಮೊನ್ನೆಯವರೆಗೂ ನಾನೇ ಇನ್ನೆರೆಡು ವರ್ಷ ಸಿಎಂ ಎನ್ನುತ್ತಿದ್ದವರು ಈಗ ಏಕಾಏಕಿ ರಾಜೀನಾಮೆ ನೀಡಿದ ಕಾರಣವೇನು ಹೇಳಿ? ಬಿಎಸ್‌ವೈ ಅವರ ಕಣ್ಣೀರಿಗೆ ನಿಮ್ಮ ದ್ರೋಹವೇ ಕಾರಣವಲ್ಲವೇ?‘ ಎಂದು ಕಾಂಗ್ರೆಸ್, ಬಿಜೆಪಿಯನ್ನು ಕೆಣಕಿದೆ.

ಇದನ್ನೂ ಓದಿ:  ಸಿ.ಎಂ. ಬದಲಾವಣೆಯಿಂದ ರಾಜ್ಯಕ್ಕೆ ಪ್ರಯೋಜನವಿಲ್ಲ: ಸಿದ್ದರಾಮಯ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು