ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರದಿಂದ ನಂದಿನಿ ಹಾಲು, ಮೊಸರು ದರ ₹2 ಏರಿಕೆ

Last Updated 23 ನವೆಂಬರ್ 2022, 19:58 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಬ್ರ್ಯಾಂಡ್‌ನ ಎಲ್ಲ ಮಾದರಿಯಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹ 2 ಹೆಚ್ಚಿಸ ಲಾಗಿದೆ. ಬುಧವಾರ ನಡೆದಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್‌) ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ನ.14 ರಂದು ಕೆಎಂಎಫ್‌ ಪ್ರತಿ ಲೀಟರ್‌ಗೆ ₹3 ಹೆಚ್ಚಿಸಲು ನಿರ್ಧರಿಸಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದರ ಹೆಚ್ಚಿಸದಂತೆ ಸೂಚಿಸಿದ್ದರು.ರೈತರಿಗೆ ಮತ್ತು ಗ್ರಾಹಕರಿಗೆ ಹೊರೆಯಾಗದಂತೆನಿರ್ಣಯ ಕೈಗೊಳ್ಳುವಂತೆ ಕೆಎಂಎಫ್‌ಗೆ ಮುಖ್ಯಮಂತ್ರಿ ತಿಳಿಸಿದ್ದರು. ಈ ಸೂಚನೆ ಅನ್ವಯ ಸಭೆ ನಡೆಸಿ ದರಗಳನ್ನು ಪರಿಷ್ಕರಿಸಲಾಗಿದೆ.

ಹಾಲು ಒಕ್ಕೂಟಗಳಲ್ಲಿ ಹಳೆಯ ದರ ಮುದ್ರಿತವಾಗಿರುವ ಪ್ಯಾಕೆಟ್‌ಗಳ ದಾಸ್ತಾನಿದೆ. ಈ ದಾಸ್ತಾನು ಮುಗಿಯುವವರೆಗೂ ಹಳೆಯ ದರ ಮುದ್ರಿತ ಪ್ಯಾಕೆಟ್‌ಗಳಲ್ಲಿ ಹಾಲು ಪೂರೈಕೆ ಯಾಗಲಿದೆ ಎಂದು ಕೆಎಂಎಫ್‌ ತಿಳಿಸಿದೆ.

’ಹೈನುಗಾರರಿಗೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ಹೆಚ್ಚಿಸಿರುವ ದರದ ಮೊತ್ತವನ್ನುರೈತರಿಗೆ ನೀಡಲಾಗುವುದು’ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ತಿಳಿಸಿದ್ದಾರೆ.

‘ಗ್ರಾಹಕರಿಂದ ದೊರೆಯುವ ಒಂದು ರೂಪಾಯಿಯಲ್ಲಿ 79 ಪೈಸೆಯನ್ನು ರೈತರಿಗೆ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ರಾಸುಗಳ ಸಾಕಣೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಪಶು ಆಹಾರ ಉತ್ಪಾದನೆಗೆ ಬಳಸಲಾಗುವ ಮೆಕ್ಕೆ ಜೋಳ, ಭತ್ತದ ತೌಡು, ಹತ್ತಿಕಾಳು ಹಿಂಡಿ, ಪೌಷ್ಟಿಕ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಹೀಗಾಗಿ, ರೈತರಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ನಂದಿನಿ ಹಾಲಿನ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ’ ಎಂದು ವಿವರಿಸಿ ದ್ದಾರೆ. ‘ದರ ಹೆಚ್ಚಳದ ಬಗ್ಗೆ ಸರ್ಕಾರದ ಹಂತದಲ್ಲೂ ಚರ್ಚಿಸ ಲಾಗಿದೆ. ನಂದಿನಿ ಹಾಲಿಗೆ ಹೋಲಿಸಿದರೆ, ರಾಜ್ಯದಲ್ಲಿನ ಪ್ರತಿ ಸ್ಪರ್ಧಿ ಬ್ರ್ಯಾಂಡ್‌ಗಳು ಮತ್ತು ಹೊರರಾಜ್ಯದಲ್ಲಿನ ಹಾಲು ಉತ್ಪಾದಕರ ಮಹಾಮಂಡಳದ ಹಾಲಿನ ದರ ಇನ್ನೂ ದುಬಾರಿ ಯಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT