ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ: ಪಠ್ಯಕ್ಕೆ ಹಿಂದೂ ಹತ್ಯಾಕಾಂಡ ಸೇರಲಿ -ಸಮಿತಿ ಶಿಫಾರಸು

Last Updated 10 ಜುಲೈ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಭಾಗವಾಗಿ ಇತಿಹಾಸ ವಿಷಯದ ತಜ್ಞರು ಸಲ್ಲಿಸಿರುವ ವರದಿಯ ಶಿಫಾರಸಿನಲ್ಲಿ, ‘ಸದ್ಯ ಬೋಧಿಸುವ ಇತಿಹಾಸ ಪಠ್ಯವನ್ನು ಬದಲಿಸಿ, ಭಾರತದ ಇತಿಹಾಸದಲ್ಲಿ ನಡೆದ ಹಿಂದೂ ಹತ್ಯಾಕಾಂಡಗಳು, ಭಾರತೀಯ ವಿಜ್ಞಾನ ಮತ್ತು ಗಣಿತವನ್ನೂ ಸೇರಿಸಬೇಕು’ ಎಂಬ ವಾದವನ್ನು ಮಂಡಿಸಲಾಗಿದೆ.‌

‘ಯುರೋಪ್‌ ದೇಶಗಳಲ್ಲೂ ಹತ್ಯಾಕಾಂಡಗಳು ನಡೆದಿದ್ದು, ಅಲ್ಲಿ ಆ ಹತ್ಯಾಕಾಂಡಗಳ ನಿರಾಕರಣೆಯನ್ನು ಅಪರಾಧೀ
ಕರಣಗೊಳಿಸಲಾಗಿದೆ. ನಮ್ಮಲ್ಲೂ ಹತ್ಯಾಕಾಂಡಗಳು ನಡೆದಿದ್ದು, ಅವುಗಳ ವಸ್ತುನಿಷ್ಠ ಅಧ್ಯಯನ ನಡೆಸಬೇಕಿದೆ’ ಎಂದು ಶಿಫಾರಸು ತಿಳಿಸಿದೆ.

ಐಐಟಿ ವಾರಾಣಸಿಯ ಪ್ರಾಧ್ಯಾಪಕ ವಿ.ರಾಮನಾಥನ್‌ ಅವರ ನೇತೃತ್ವದ ಒಂಬತ್ತು ಸದಸ್ಯರನ್ನು ಒಳಗೊಂಡ ಸಮಿತಿ ಈ ವರದಿ ಸಿದ್ಧಪಡಿಸಿದೆ. ಶಾಲಾ ಮಕ್ಕಳಿಗೆ ‘ಭಾರತೀಯ ಜ್ಞಾನ’ ವಿಷಯದ ಪಠ್ಯದಲ್ಲಿ ಈ ಅಂಶವನ್ನು ಸೇರಿಸುವಂತೆ ಸಮಿತಿ ಹೇಳಿದೆ.

‘ಸತ್ಯ ಎದುರಿಸಲು ಧೈರ್ಯ ಇಲ್ಲದಿರುವುದು ನಮ್ಮ ದೇಶದ ಅತಿ ದೊಡ್ಡ ದುರಂತ. ದೇಶದಲ್ಲಿ ಹಿಂದೂಗಳ ಹತ್ಯಾ
ಕಾಂಡದ ಬಗ್ಗೆ ವಿವಾದರಹಿತವಾಗಿ ಚರ್ಚಿಸಲು ಸಾಧ್ಯವೇ ಇಲ್ಲ. ಈಗಾಗಲೇ ಮಲಬಾರಿನಲ್ಲಿ ನಡೆದ ಮಾಪಿಳಾ ದಂಗೆಯಲ್ಲಿ ಹಿಂದೂಗಳ ಹತ್ಯೆ, ಮಹಾರಾಷ್ಟ್ರದಲ್ಲಿ ಬ್ರಾಹ್ಮಣರ ಹತ್ಯೆ, ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯ ವಿಷಯ ಪಠ್ಯ ಪುಸ್ತಕದಲ್ಲಿ ಇಲ್ಲ’ ಎಂದೂ ವರದಿ ಉಲ್ಲೇಖಿಸಿದೆ.

‘ಇತಿಹಾಸದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡಗಳ ವಿಷಯ ಕಲಿಕೆಯನ್ನು ಒಂದು ಸಮುದಾಯವನ್ನು ಪ್ರಚೋದಿ
ಸುವ ಯತ್ನವಾಗಿ ನೋಡಬಾರದು. ನಮ್ಮ ಉದ್ದೇಶ ಚರಿತ್ರೆಯನ್ನು ಸ್ಥಳೀಯ ಸಮು
ದಾಯಗಳ ದೃಷ್ಟಿಯಿಂದ ನೋಡಬೇಕಿದೆ. ಈಗ ಇರುವ ಪಠ್ಯ ಪದ್ಧತಿಯಲ್ಲಿ ಸ್ಥಳೀಯ ಸಮುದಾಯದ ದೃಷ್ಟಿಯಿಂದ ನೋಡುವ ಪ್ರಯತ್ನ ಆಗಿಲ್ಲ. ಹೀಗಾಗಿ, ನಾವು ಹೀಗೆ ಶಿಫಾರಸು ಮಾಡಿದ್ದೇವೆ’ ಎಂದು ಸಮಿತಿ ಸಮರ್ಥಿಸಿಕೊಂಡಿದೆ.

‘ಇತಿಹಾಸ ಪಠ್ಯಗಳು ಆಕ್ರಮಣಕಾರರ, ವಸಾಹತುಶಾಹಿಗಳ ದೃಷ್ಟಿಯಿಂದ ಹೊರತಾಗಿ,ಸದೃಢ ರಾಷ್ಟ್ರೀ
ಯತೆಯನ್ನು ಗುರುತಿಸಿ, ಬೆಳೆಸಬೇಕು. ಮರಾಠ, ಚೋಳ, ವಿಜಯನಗರ, ಕಾಶ್ಮೀರ, ಕಳಿಂಗ ಸೇರಿಂತೆ ಪ್ರಾಚೀನ ಭಾರತದ ರಾಜರ ಬಗ್ಗೆ ನಮ್ಮ ಇತಿಹಾಸ ಪಠ್ಯಗಳು ಇರಬೇಕು. ನಮ್ಮ ಇತಿಹಾಸ ಪಠ್ಯಗಳಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ಪ್ರತ್ಯೇಕ ಅಧ್ಯಾಯಗಳಿವೆ. ಆದರೆ, ಭಾರತೀಯ ಧರ್ಮ ಪರಂಪರೆಯನ್ನು ಸಮಗ್ರವಾಗಿ ಮತ್ತು ಸರಿಯಾಗಿ ಪರಿಚಯಿಸಿಲ್ಲ. ಕರ್ನಾಟಕದ ರಾಜರ ಕುರಿತಾದ ಹಲವು ಚಾರಿತ್ರಿಕ ಅಂಶಗಳು, ಸಾಮ್ರಾಜ್ಯಗಳು, ಬರಹಗಾರರ ವಿವರ ಕೈಬಿಡಲಾಗಿದೆ ಅಥವಾ ಅಲ್ಪಸ್ವಲ್ಪ ಮಾಹಿತಿ ನೀಡಲಾಗಿದೆ’ ಎಂದೂ ವರದಿಯಲ್ಲಿದೆ.

ಭಾರತೀಯ ಗಣಿತ:ಈಗ ಬೋಧಿಸುತ್ತಿರುವ ಗಣಿತ ಮತ್ತು ವಿಜ್ಞಾನ ಪಠ್ಯಗಳ ಬಗ್ಗೆ ಸಮಿತಿಯ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ನ್ಯೂಟನ್‌ನ ತಲೆಯ ಮೇಲೆ ಸೇಬು ಹಣ್ಣು ಬಿದ್ದ ಕಾರಣ ಗುರುತ್ವಾಕರ್ಷಣ ತತ್ವ ಹೊಳೆಯಿತು ಮತ್ತು ಆರ್ಕಿಮಿಡೀಸ್‌ಗೆ ತೇಲುವಿಕೆಯ ಬಲದ ತತ್ವದ ಬಗ್ಗೆ ಸ್ನಾನದ ಮನೆಯಲ್ಲಿ ಹೊಳೆಯಿತು ಎಂಬ ಬಗ್ಗೆ ಪುರಾವೆಗಳೇ ಇಲ್ಲ. ಅಂಥ ಕಥನಗಳು ಪ್ರಸಿದ್ಧಿ ಪಡೆದಿವೆ ಮತ್ತು ಅವುಗಳನ್ನು ಮತ್ತೆ ಮತ್ತೆ ಬೋಧಿಸುತ್ತಿದ್ದೇವೆ’ ಎಂದು ಹೇಳಿರುವ ಸಮಿತಿ, ಪೈಥೋಗರಸ್‌ ಸಿದ್ಧಾಂತವನ್ನು ‘ತಥಾಕಥಿತ’ ಎಂದು ವ್ಯಾಖ್ಯಾನಿಸಿದೆ.

ಗ್ರೀಕ್‌ ಗಣಿತ ಮಾದರಿಯನ್ನು ಕಡಿಮೆ ಮಾಡಿ, ಭಾರತೀಯ ಗಣಿತ ತಜ್ಞರು ಮತ್ತು ಅವರ ಪರಿಕಲ್ಪನೆಗಳನ್ನು ಮಕ್ಕಳು ಅಧ್ಯಯನ ಮಾಡಬೇಕು. ಅಮಾವಾಸ್ಯೆ, ಪೌರ್ಣಿಮೆ, ಶುಕ್ಲ ಪಕ್ಷ, ಕೃಷ್ಣ ಪಕ್ಷ ಮುಂತಾದ ಪದಗಳು ಹಾಗೂ ಸಂಸ್ಕೃತ ಪದಗಳನ್ನು ಮಕ್ಕಳು ಕಲಿಯಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.

ವಿಜ್ಞಾನದಲ್ಲಿಯೂ ಭಾರತೀಯ ಪಠ್ಯದ ಬಗ್ಗೆ ವಿದ್ಯಾರ್ಥಿಗಳು ಬ್ರಹ್ಮಾಂಡ (ನಾಸದೀಯ ಸೂಕ್ತ), ವಸ್ತು ವಿಕಾಸ (ಶತಪಥ ಬ್ರಾಹ್ಮಣ). ಅಣು ಮತ್ತು ಪರಮಾಣು (ಕಥಾ ಉಪನಿಷದ್‌), ಪದಾರ್ಥಗಳ ವಿಂಗಡನೆ (ವೈಶೇಷಿಕ) ಹೀಗೆ ಪಠ್ಯಗಳನ್ನು ಅಳವಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT