ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌: ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಐವರಿಗೆ ಸಾವಿರದೊಳಗಿನ ರ‍್ಯಾಂಕ್‌

Last Updated 8 ಸೆಪ್ಟೆಂಬರ್ 2022, 14:52 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ನಗರದ ಎಕ್ಸ್‌ಪರ್ಟ್‌ ಪಿ.ಯು.ಕಾಲೇಜಿನ ಐವರು ವಿದ್ಯಾರ್ಥಿಗಳು 1 ಸಾವಿರದ ಒಳಗಿನ ರ‍್ಯಾಂಕ್‌ ಪಡೆದಿದ್ದಾರೆ.

ನೀಟ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಗುರುವಾರ ಅಭಿನಂದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀಟ್ ಪರೀಕ್ಷೆಗೆ ದೇಶದಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ 1168 ವಿದ್ಯಾರ್ಥಿಗಳಲ್ಲಿ 1094 ಮಂದಿ ( ಶೇ 93ರಷ್ಟು) ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಜನರಲ್ ಮೆರಿಟ್‍ನಲ್ಲಿ ಅಖಿಲ ಭಾರತ ಮಟ್ಟದ ಮೊದಲ 1 ಸಾವಿರದ ಒಳಗಿನ 5 ರ‍್ಯಾಂಕ್‌ಗಳು ನಮ್ಮ ಕಾಲೇಜಿಗೆ ದೊರಕಿವೆ. ಸ್ಕಂದ ಶಾನುಭಾಗ್ 175ನೇ ರ‍್ಯಾಂಕ್‌, ಪ್ರಿಯಾ ಅಶೋಕ್ ಪಾಟೀಲ 478ನೇ, ಕಾರ್ತಿಕ್ ರಾಮ್ ಬಿ.ಎನ್. 878ನೇ ಹಾಗೂ ವಿವೇಕ್‍ರಾಜ್ ಎಂ. ದಂಡು 977ನೇ ರ‍್ಯಾಂಕ್‌, ಪಡೆದಿದ್ದಾರೆ. ಕ್ಯಾಟಗರಿ ವಿಭಾಗದಲ್ಲಿ ಶ್ರೇಯಸ್ ಕೆ. ನಿಶಾನಿ ಅವರು 45ನೇ ರ‍್ಯಾಂಕ್‌ ಹಾಗೂ ವಿಶಾಲ್ ಎಸ್. 267ನೇ ರ‍್ಯಾಂಕ್‌ ಪಡೆದಿದ್ದಾರೆ. ಇದು ಶಿಕ್ಷಣ ಸಂಸ್ಥೆಯ ಗುಣಮಟ್ಟಕ್ಕೆ ಕನ್ನಡಿ’ ಎಂದು ತಿಳಿಸಿದರು.

‘ಕಾಲೇಜಿನ ಎಂಟು ವಿದ್ಯಾರ್ಥಿಗಳು 675ಕ್ಕಿಂತ ಹೆಚ್ಚು, 20 ವಿದ್ಯಾರ್ಥಿಗಳು 650 ಅಂಕಕ್ಕಿಂತ ಹೆಚ್ಚು, 43 ಮಂದಿ 625ಕ್ಕಿಂತ ಹೆಚ್ಚು, 73 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ, 146 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ, 225 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಆದಿತ್ಯ ಅವರ ತಂದೆ ಮಂಜುನಾಥ ಕಾಮತ್‌, ‘ಮಗ ಸಾಧನೆ ಖುಷಿ ತಂದಿದೆ. ಭವಿಷ್ಯದಲ್ಲಿ ಏನಾಗಬೇಕು ಎಂಬ ಸಂಪೂರ್ಣ ಸ್ವಾತಂತ್ರ್ಯ ಅವನಿಗೇ ಬಿಟ್ಟುಬಿಟ್ಟಿದ್ದೇವೆ. ಅಂಕ ಮುಖ್ಯವಲ್ಲ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು’ ಮುಖ್ಯ ಎಂದು ತಿಳಿಸಿದರು.

175ನೇ ರ‍್ಯಾಂಕ್‌ ಪಡೆದ ಸ್ಕಂದ ಅವರು ಉಡುಪಿಯ ರವೀಂದ್ರ ಹಾಗೂ ಭಾರತಿ ದಂಪತಿಯ ಪುತ್ರ. ರವಿಂದ್ರ ಅವರು ನಾಸಿಕ್‌ನಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದಾರೆ.

’ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇತ್ತು. ಎಕ್ಸ್‌ಪರ್ಟ್‌ ಕಾಲೇಜಿನಲ್ಲೂ ನಮಗೆ ಉತ್ತಮ ಬೆಂಬಲ ನಿಡಿದ್ದಾರೆ’ ಎಂದು ಸ್ಕಂದ ತಿಳಿಸಿದರು.

478ನೇ ರ್‍ಯಾಂಕ್‌ ಪಡೆದ ಪ್ರಿಯಾ ಅಶೋಕ್‌ ಪಾಟೀಲ, ‘ಇಷ್ಟು ಉತ್ತಮ ರ‍್ಯಾಂಕ್ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಬೆಂಗಳೂರಿನ ಬಿಎಂಸಿಯಲ್ಲಿ ಎಂಬಿಬಿಎಸ್‌ ಶಿಕ್ಷಣ ಮುಂದುವರಿಸಲು ಬಯಸುತ್ತೇನೆ’ ಎಂದರು. ಪ್ರಿಯಾ ಅವರ ತಂದೆ ಕಲಬುರ್ಗಿಯ ಅಶೋಕ್‌ ಪಾಟೀಲ ಹಾಗೂ ತಾಯಿ ಜ್ಯೋತಿ ಅವರು ಮಗಳಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.

ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್‌, ಗಣಿತ ಉಪನ್ಯಾಸಕ ವಿನಯ್‌ ಕುಮಾರ್ ಹಾಗೂ ಸಂಸ್ಥೆಯ ಉಪಾಧ್ಯಕ್ಷೆ ಉಷಾಪ್ರಭಾ ನಾಯಕ್‌ ಇದ್ದರು.

ನೀಟ್‌: ಎಕ್ಸ್‌ಪರ್ಟ್‌ ವಿದ್ಯಾರ್ಥಿಗಳ ಸಾಧನೆ: ಸಮರ್ಥ್ ಎಸ್. ಬೆಟಗೇರಿ (1196ನೇ ರ‍್ಯಾಂಕ್‌), ಅಮರೇ ಗೌಡ (1281), ಅರ್ಹನ್ ವಿಲಾಸ್ ಕೆ. ( 1270), ಸಾತ್ವಿಕ್ ಎ.ಎಸ್. (1443), ಮದನ್ ಕುಮಾರ್ ಎಸ್.ವಿ. (1522), ಪವನ್ ಎಸ್. ಧುಲಶೆಟ್ಟಿ (1698), ಯಶಸ್ವಿನಿ ಎಸ್. ಬಾಳಪ್ಪನವರ್ (1836), ‌‌ತುಬಾಚಿ ಕೃತಿಕ್ ಚನ್ನಗೌಡ (ಅಂಕ 665), ದೀಪಾ ರಾಜಶೇಖರ್ ಕುಲ್ಲೂರ್ (ಅಂಕ 665), ಅನುಜ್ಞಾ ಕೆ. (ಅಂಕ 665), ಪ್ರಣವ್ ಎಸ್ (ಅಂಕ 660), ದೇವ್‍ದೀಪ್ ಬಿ. ಹಲಗೆರಿ (ಅಂಕ 656), ವೃಷಭ್ ವಿ. ಜವಳಿ (ಅಂಕ 655),, ಮನಸ್ವಿ ಶಿವನಗೌಡ ಪಾಟೀಲ್ (ಅಂಕ 648), ದಿಶಾ ಎನ್. (ಅಂಕ 648), ವೀಣಾ ಎಂ.ಡಿ (ಅಂಕ 648), ಹಿಮಾಂಶು ಎಲ್. (ಅಂಕ 645), ಈಶಾನ್ಯ ಬಿ.ಯು. (ಅಂಕ 645), ದೀಪ್ತಿ ಕಲ್ಲೂರ್ (ಅಂಕ 642), ಸ್ನೇಹಲ್ ಮಹಿಮಾ ಕ್ಯಾಸ್ಟಲಿನೊ (ಅಂಕ 642), ಸುಜನ್ ವಿ.ಎಸ್. (ಅಂಕ 640), ಅಭಿಷೇಕ್ ಬಿ.ವೈ. (ಅಂಕ 640), ಯತೀಂದ್ರ ಪಿ.ಎಂ. (ಅಂಕ 637), ಪಾರ್ಥ ಶಿಂಧೆ (ಅಂಕ 637), ರಕ್ಷನ್ ರೈ (ಅಂಕ 637), ನಮಿತಾ ಎನ್. (ಅಂಕ 636), ದಿಶಾಂತ್ ಕೆ. (ಅಂಕ 636), ಅರುಣ್ ದೇವ್ ಕೆ.ಎಚ್. (ಅಂಕ 635), ಪ್ರಜ್ವಲ್ ಎಸ್.ಗೌಡ (ಅಂಕ 633), ಸೌಜನ್ಯ ಪಟ್ಟೆದ್ (ಅಂಕ 633), ಸೂರ್ಯದೀಪ್ ಎಸ್. (ಅಂಕ 633), ಶ್ರೀಸಂಪತ್ ಎಸ್.ಡಿ. (ಅಂಕ 631), ಶ್ರೇಯಸ್ ಭಟ್ (ಅಂಕ 630), ಭವಿನ್ ಸುನಿಲ್ ಶೆಟ್ಟಿ (ಅಂಕ 630), ಮೋಕ್ಷಾ ಧಾಯಿನಿ ಎಂ.ಎ. (ಅಂಕ 629) ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT