ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌– ಸಿಇಟಿಗೆ ಸರ್ಕಾರಿ ಕಾಲೇಜಿನಲ್ಲಿ ಉಚಿತ ತರಬೇತಿ; ವಡಗಾವಿ ಉಪನ್ಯಾಸಕರ ಕಾಳಜಿ

Last Updated 19 ಸೆಪ್ಟೆಂಬರ್ 2022, 2:42 IST
ಅಕ್ಷರ ಗಾತ್ರ

ಬೆಳಗಾವಿ: ಕೋಚಿಂಗ್‌ ಸೆಂಟರ್‌ಗಳಲ್ಲಿ ಸಾವಿರಾರು ರೂಪಾಯಿ ವ್ಯಯಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌)ಗೆ ತರಬೇತಿ ಪಡೆಯುವುದು ಬಡ ವಿದ್ಯಾರ್ಥಿಗಳಿಗೆ ಅಸಾಧ್ಯ. ಇದನ್ನುಮನಗಂಡ ಇಲ್ಲಿನ ವಡಗಾವಿಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿ, ಸಿಇಟಿ ಮತ್ತು ನೀಟ್‌ಗೆ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ.

ಇಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷದಲ್ಲಿ 67, ದ್ವಿತೀಯ ವರ್ಷದಲ್ಲಿ 33 ಸೇರಿ 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿ
ದ್ದಾರೆ. ಕಳೆದ ನಾಲ್ಕು ವಾರಗಳಿಂದ ಅವರಿಗೆ ತರಬೇತಿ ನೀಡಲಾಗುತ್ತಿದೆ. ಮಂಗಳೂರಿನ ಬಾಸ್ಕೋಸ್‌ ಪಬ್ಲಿಕೇಷನ್ಸ್‌ ಇದಕ್ಕೆ ಅಗತ್ಯವಾದ ಕಲಿಕಾ ಸಾಮಗ್ರಿ ಪೂರೈಸಿದೆ.

‘ನಮ್ಮ ಕಾಲೇಜಿಗೆ ಬೆಳಗಾವಿ ನಗರ ಮಾತ್ರವಲ್ಲದೆ, ಸುತ್ತಲಿನ ಹಳ್ಳಿಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಈ ಪೈಕಿ ಹೆಚ್ಚಿನವರು ಬಡವರು. ಅವರಿಗೆಅನುಕೂಲವಾಗಲೆಂದು ಕಾಲೇಜಿನ ಉಪನ್ಯಾಸಕರೆಲ್ಲ ಕೂಡಿಕೊಂಡು ಪ್ರತಿ ಶನಿವಾರ ಮತ್ತು ಭಾನುವಾರ ತರಬೇತಿ ಕೊಡುತ್ತಿದ್ದೇವೆ. ಬೇರೆ ಸರ್ಕಾರಿ ಕಾಲೇಜಿನ ಉಪನ್ಯಾಸಕರೂ ನಮ್ಮ ಸೇವೆಗೆ ಕೈಜೋಡಿಸಿದ್ದಾರೆ’ ಎಂದು ಪ್ರಾಚಾರ್ಯ ಶ್ರೀಶೈಲ ಕಾಪಸೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಗತ್ಯವಿರುವವರಿಗೆ ತರಬೇತಿ ನೀಡಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಆಸಕ್ತರಿದ್ದರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳೂ ತರಬೇತಿಗೆ ಹಾಜರಾಗಬಹುದು. ಮುಂದಿನ ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ, ಮಾರ್ಗದರ್ಶನ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಶೈಕ್ಷಣಿಕ ವರ್ಷವಿಡೀ ಈ ತರಗತಿ ನಡೆಯುತ್ತದೆ’ ಎನ್ನುತ್ತಾರೆ ಉಪನ್ಯಾಸಕರಾದ ಎನ್‌.ಬಿ.ಮರೆಣ್ಣವರ, ಡಾ.ಎಸ್‌.ಎಸ್‌.ಪಾಟೀಲ ಹಾಗೂ ಎಸ್‌.ಎಸ್‌.ಚುಳೇಕರ್‌.

***

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಖಾಸಗಿ ಸಂಸ್ಥೆಗಳಲ್ಲಿ ತರಬೇತಿ ಪಡೆಯಲು ಬಡತನ ಅಡ್ಡಿಯಾಗಿದೆ. ಉಚಿತ ತರಬೇತಿಯಿಂದ ಅನುಕೂಲವಾಗಿದೆ.
–ಶಿವಾನಂದ ಹೋಳಿ, ಸೃಷ್ಟಿ ಅಗಸಿಮನಿ, ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT