ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಕರಿಗೆ ಬೆದರಿಕೆ ಕರೆ ಪ್ರಕರಣ: ಕಾರಾಗೃಹದ 7 ಮಂದಿಗೆ ನೋಟಿಸ್‌

Last Updated 17 ಜನವರಿ 2023, 21:45 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿ ಜಯೇಶ್‌ ಪೂಜಾರಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ಮುಖ್ಯಅಧೀಕ್ಷಕ ಕೃಷ್ಣಕುಮಾರ್‌ ಅವರು ಏಳು ಜನರಿಗೆ ನೋಟಿಸ್‌ ನೀಡಿದ್ದಾರೆ.

ಕಾರಾಗೃಹದ ನಾಲ್ವರು ಜೈಲರ್‌, ಇಬ್ಬರು ವಾರ್ಡರ್‌ ಹಾಗೂ ಒಬ್ಬ ಕಾನ್‌ಸ್ಟೆಬಲ್‌ಗೆ ನೋಟಿಸ್‌ ನೀಡಲಾಗಿದೆ.

ಕೈದಿಯ ಕೈಗೆ ಮೊಬೈಲ್‌ ಫೋನ್‌ ಸಿಕ್ಕಿದ್ದು ಹೇಗೆ, ಈಗ ಅದು ಎಲ್ಲಿದೆ ಎಂಬ ಬಗ್ಗೆ 3 ದಿನಗಳಲ್ಲಿ ಉತ್ತರಿ
ಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ವಹಿಸಲಾಗುವುದು ಎಂದೂ ತಿಳಿಸಿದ್ದಾರೆ.

ಐವರ ಹೇಳಿಕೆ ದಾಖಲಿಸಲಿರುವ ‍ಪೊಲೀಸರು( ನಾಗ್ಪುರ ವರದಿ): ‘ನಿತಿನ್‌ ಗಡ್ಕರಿ ಕಚೇರಿಗೆ ಬೆದರಿಕ ಕರೆ ಮಾಡಿದ್ದ ಆರೋಪಿಯು ಈ ಕೃತ್ಯದಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಪೊಲೀಸರು ‍ಆತನೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದ ಐವರು ವ್ಯಕ್ತಿಗಳ ಹೇಳಿಕೆಯನ್ನು ದಾಖಲು ಮಾಡಲಿದ್ದಾರೆ’ ಎಂದು ನಾಗ್ಪುರ ಪೊಲೀಸ್‌ ಕಮಿಷನರ್‌ ಮಂಗಳವಾರ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT