ಬುಧವಾರ, ಮೇ 12, 2021
18 °C

ಜರ್ಮನಿಯ ಕನ್ನಡ ಬಳಗದಿಂದ ‘ಎನ್‌ಎಸ್‌ಎಲ್‌ ನುಡಿ ನಮನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜರ್ಮನಿಯ ಕನ್ನಡ ಬಳಗವು ‘ಎನ್‌ಎಸ್‌ಎಲ್‌ ನುಡಿನಮನ’ ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ಕವಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರನ್ನು ಸ್ಮರಿಸಿತು.

‘ಕಾರ್ಯಕ್ರಮದಲ್ಲಿ ಎನ್‌ಎಸ್‌ಎಲ್‌ ಅವರ ಜೀವನ ಮತ್ತು ಸಾಧನೆಗಳನ್ನು ಮೆಲುಕು ಹಾಕಲಾಯಿತು. ಜರ್ಮನಿಯಲ್ಲಿರುವ ಕನ್ನಡಿಗರು ಹಾಗೂ ಅವರ ಮಕ್ಕಳು ಭಾವಗೀತೆಗಳನ್ನು ಹಾಡಿದರು. ಕವನ ಮತ್ತು ಶಿಶು ಪದ್ಯಗಳನ್ನು ವಾಚಿಸಿದರು’ ಎಂದು ಕೆರ್ಪೆನ್‌ ನಗರದಲ್ಲಿ ನೆಲೆಸಿರುವ ಸಂತೋಷ್‌ ಶ್ರೀಧರ್‌ ತಿಳಿಸಿದರು.

‘ಡ್ರೆಸ್ಡೇನ್‌ನಲ್ಲಿ ನೆಲೆಸಿರುವ ಲಕ್ಷ್ಮಿ ಅವರು ‘ಈ ಬಾನು ಈ ಚುಕ್ಕಿ’ ಗೀತೆಯನ್ನು ಪ್ರಸ್ತುತಪಡಿಸಿದರು. ಮ್ಯೂನಿಕ್‌ನಲ್ಲಿರುವ ಸವಿತಾ, ಫ್ರಾಂಕ್ಫರ್ಟ್‌ನಲ್ಲಿ ವಾಸವಿರುವ ಶೋಭಾ ಲೋಕೇಶ್‌ ಹಾಗೂ ಬರ್ಲಿನ್‌ನಲ್ಲಿರುವ ಶ್ವೇತ ಅವರು ಕವನಗಳನ್ನು ವಾಚಿಸಿದರು’ ಎಂದು ಅವರು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು