ಶನಿವಾರ, ಜನವರಿ 29, 2022
19 °C

ಓಮೈಕ್ರಾನ್‌ನಿಂದ ಚೇತರಿಸಿಕೊಂಡಿದ್ದ 46 ವರ್ಷದ ವೈದ್ಯರಲ್ಲಿ ಮತ್ತೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್‌ನಿಂದ ಚೇತರಿಸಿಕೊಂಡಿದ್ದ 46 ವರ್ಷದ ವೈದ್ಯರಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 

ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಯಿಂದ (ಜೀನೋಮ್‌ ಸೀಕ್ವೆನ್ಸಿಂಗ್‌) ಅವರಿಗೆ ಹೊಸ ತಳಿಯ ಕೊರೊನಾ ವೈರಾಣು ತಗುಲಿರುವುದು ಕಳೆದ ಗುರುವಾರ ದೃಢಪಟ್ಟಿತ್ತು. ದೇಶದಲ್ಲಿ ವರದಿಯಾದ ಮೊದಲ ಓಮೈಕ್ರಾನ್ ಪ್ರಕರಣವೂ ಇದಾಗಿತ್ತು. ಅವರು ಇಲ್ಲಿನ ಬೌರಿಂಗ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಸಕ್ಕೆ ಒಳಗಾಗಿದ್ದರು. ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಹೊಂದಿದ್ದರಿಂದ ಮನೆಗೆ ಕಳುಹಿಸಲು ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಯನ್ನು ಸೋಮವಾರ ನಡೆಸಲಾಗಿತ್ತು. ಮಂಗಳವಾರ ಪರೀಕ್ಷಾ ವರದಿ ಬಂದಿದ್ದು, ಅವರಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 

‘ವೈದ್ಯರ ಪ್ರತ್ಯೇಕವಾಸದ ಅವಧಿ ಮುಗಿದಿದ್ದರಿಂದ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ ಕೊರೊನಾ ಸೋಂಕು ಇನ್ನೂ ಸಕ್ರಿಯವಾಗಿ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರು ಆರೋಗ್ಯವಾಗಿದ್ದು, ರೋಗ ಲಕ್ಷಣವಿಲ್ಲ. ಅವರ ಸಂಪರ್ಕಿ
ತರ ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ ವರದಿ ಇನ್ನೂ ಬಂದಿಲ್ಲ. ಬುಧವಾರ ಬರುವ ಸಾಧ್ಯತೆ ಇದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್‌ ‘ಪ್ರಜಾವಾಣಿ’ಗೆತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು