ಮಂಗಳವಾರ, ನವೆಂಬರ್ 24, 2020
26 °C
ಶಾಲೆಗಳಿಗೆ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಸೂಚನೆ

ತಜ್ಞರ ಶಿಫಾರಸಿನಂತೆ ಆನ್‌ಲೈನ್‌ ಶಿಕ್ಷಣ: ಸುರೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆನ್‌ಲೈನ್‌ ಶಿಕ್ಷಣ ಕುರಿತಂತೆ ತಜ್ಞರ ಶಿಫಾರಸಿನಲ್ಲಿರುವ ಅವಧಿಯನ್ವಯವೇ ಆನ್‌ಲೈನ್‌ನಲ್ಲಿ ಬೋಧನೆ ಮಾಡ ಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಾಲೆಗಳಿಗೆ ಸೂಚಿಸಿದ್ದಾರೆ.

‘ಕೋವಿಡ್‌ ಕಾರಣದಿಂದ ಶಾಲೆಗಳು ಇನ್ನೂ ಆರಂಭ ಆಗದಿರುವು ದರಿಂದ ತಂತ್ರಜ್ಞಾನ ಆಧಾರಿತ ಶಿಕ್ಷಣ ಕುರಿತು ತಜ್ಞರ ಸಮಿತಿ ವರದಿ ನೀಡಿದೆ’ ಎಂದೂ ಅವರು ಹೇಳಿದ್ದಾರೆ.

ಆದರೆ, ಶಾಲೆಗಳು ಸರ್ಕಾರ ಹೊರಡಿಸಿರುವ ಆನ್‌ಲೈನ್ ಮಾರ್ಗ ಸೂಚಿ ಪಾಲಿಸದೆ ಹೆಚ್ಚಿನ ಅವಧಿ ತರಗತಿಗಳನ್ನು ನಡೆಸುತ್ತಿರುವುದರಿಂದ ಮಕ್ಕಳ ಆರೋಗ್ಯ ಮತ್ತು ದೃಷ್ಟಿಯ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂಬ ವರದಿಗಳು ಬಂದಿವೆ. ಹೀಗಾಗಿ, ಆನ್‌ಲೈನ್‌ ಶಿಕ್ಷಣದ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸುತ್ತೋಲೆಯಲ್ಲಿ ಏನಿದೆ: ‘ಪ್ರತಿ ತರಗತಿ ಮಧ್ಯೆ 30 ನಿಮಿಷ ವಿರಾಮ ಇರಬೇಕು. 6 ಮತ್ತು ನಂತರದ ತರಗತಿಗಳಿಗೆ ಅವಶ್ಯಗಳಿಗೆ ಅನುಗುಣವಾಗಿ 30-45 ನಿಮಿಷಗಳು, ವಯೋಮಾನಕ್ಕೆ ಅನುಗುಣವಾಗಿ ದಿನಕ್ಕೆ 1ರಿಂದ 4 ಗರಿಷ್ಠ ಅವಧಿ, 2ನೇ ತರಗತಿಯ
ವರೆಗೆ ವಾರದಲ್ಲಿ ಪರ್ಯಾಯ ದಿನ ಗಳಲ್ಲಿ ಶಿಕ್ಷಣ, 3ನೇ ತರಗತಿಯ ನಂತರ ವಾರಕ್ಕೆ ಗರಿಷ್ಠ 5 ದಿನ, 2ನೇ ತರಗತಿ ಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ ಅಥವಾ ಪೋಷಕರ ಅನು ಮತಿ ಮೇರೆಗೆ ವಯಸ್ಕರು ಉಪಸ್ಥಿತ
ರಿರಬೇಕು’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು