ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮೀಸಲಾತಿ | ನಾಳೆ ಹೆದ್ದಾರಿಗಳು, ಗ್ರಾಮ ರಸ್ತೆಗಳು ಬಂದ್‌

ಹೋರಾಟ ತೀವ್ರಗೊಳಿಸಲು ಪಂಚಮಸಾಲಿ ಸಮಾಜ ನಿರ್ಧಾರ
Last Updated 2 ಮಾರ್ಚ್ 2023, 20:53 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ‘2ಎ’ ಮೀಸಲಾತಿಗೆ ಪಂಚಮಸಾಲಿ ಸಮಾಜ ಸೇರ್ಪಡೆಗೊಳಿಸಲು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಮಾರ್ಚ್ 4ಕ್ಕೆ 50 ದಿನಗಳನ್ನು ಪೂರೈಸುತ್ತಿದ್ದು, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಪಂಚಮಸಾಲಿ ಸಮಾಜ ನಿರ್ಧರಿಸಿದೆ.

ಮಾರ್ಚ್‌ 4 ರಂದು ಪಂಚಮಸಾಲಿ ಸಮಾಜದ ಜನರು ರಾಜ್ಯದ ಎಲ್ಲೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಗ್ರಾಮ ರಸ್ತೆಗಳನ್ನು ಬಂದ್‌ ಮಾಡಬೇಕು. ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಕೊಟ್ಟು ತಪ್ಪಿದ್ದಾರೆ. 26 ತಿಂಗಳಿನಿಂದ ನಿರಂತರ ಹೋರಾಟ ನಡೆಸಿದರೂ, ಸರ್ಕಾರದ ಸ್ಪಂದನೆ ದೊರೆತಿಲ್ಲ. ಪಂಚಮಸಾಲಿ, ಗೌಡ ಮಲೇಗೌಡ, ದೀಕ್ಷಾ ಲಿಂಗಾಯತ ಚಳವಳಿ ಹತ್ತಿಕ್ಕಲು ಸರ್ಕಾರದ ಸಚಿವರೇ ಪ್ರಯತ್ನಿಸಿದ್ದಾರೆ. ಹೃದಯವಿಲ್ಲದ ಈ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಚಿವರು ಹೋರಾಟಗಾರರನ್ನು ಮಾತು ಕತೆಗೂ ಕರೆದಿಲ್ಲ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ರಾಷ್ಟ್ರೀಯ ಪಂಚ ಸೇನಾ ಅಧ್ಯಕ್ಷ ಡಾ.ಬಿ.ಎಸ್.ಪಾಟೀಲ ನಾಗರಾಳ್ ಹುಲಿ ಮಾತನಾಡಿ, ‘ನಮ್ಮ ಜಗದ್ಗುರುಗಳನ್ನು ನಡುಬೀದಿಯಲ್ಲಿ ಕೂರಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡವಳಿಕೆ ತೋರಿಸುತ್ತದೆ. ಇದು ಇಡೀ ಪಂಚಮಸಾಲಿ ಸಮಾಜಕ್ಕೆ ಮಾಡುತ್ತಿರುವ ಅವಮಾನ. ಮೀಸಲಾತಿ ಘೋಷಿಸಲು ಮಾರ್ಚ್‌ 15ರವರೆಗೆ ಗಡುವು ನೀಡಲಾಗಿದೆ. ಸರ್ಕಾರ ಸ್ಪಂದಿಸದಿದ್ದರೆ ಎಲ್ಲ ಕ್ಷೇತ್ರಗಳಿಗೂ ಭೇಟಿ ನೀಡಿ ಸಮಾಜಕ್ಕೆ ಈ ಸರ್ಕಾರ ಮಾಡಿರುವ ಅಪಮಾನ, ಅನ್ಯಾಯಗಳನ್ನು ಜನತಾ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT