ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರ್ವ’ ನಾಟಕ: ಟೆಕೆಟ್‌ಗಳೆಲ್ಲ ಬಿಕರಿ

Last Updated 22 ಅಕ್ಟೋಬರ್ 2021, 17:35 IST
ಅಕ್ಷರ ಗಾತ್ರ

ಬೆಂಗಳೂರು:ಮೈಸೂರು ರಂಗಾಯಣ ಪ್ರಸ್ತುತಪಡಿಸುತ್ತಿರುವ ‘ಪರ್ವ’ ನಾಟಕವು ಇದೇ ಶನಿವಾರ ಮತ್ತು ಭಾನುವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಪ್ರದರ್ಶನ ಕಾಣಲಿದ್ದು, ನಾಟಕದ ಎಲ್ಲ ಟಿಕೆಟ್‌ಗಳು ಬಿಕರಿ ಆಗಿವೆ.

ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿ ಆಧರಿಸಿದ ಈ ನಾಟಕವನ್ನು ರಂಗಕರ್ಮಿ ಪ್ರಕಾಶ್‌ ಬೆಳವಾಡಿ ನಿರ್ದೇಶಿಸಿದ್ದಾರೆ.8 ಗಂಟೆಗಳ ಈ ನಾಟಕದಲ್ಲಿ ಮಧ್ಯಾಹ್ನ ಊಟಕ್ಕೆ ಅರ್ಧಗಂಟೆ ಹಾಗೂ ತಲಾ 10 ನಿಮಿಷಗಳ ಮೂರು ಚಹಾ ವಿರಾಮ ನೀಡಲಾಗುತ್ತದೆ.

₹500 ಹಾಗೂ ₹250 ಟಿಕೆಟ್ ದರ ನಿಗದಿ ಪಡಿಸಿ, ಟಿಕೆಟ್‌ಗಳುರವೀಂದ್ರ ಕಲಾಕ್ಷೇತ್ರದ ಕೌಂಟರ್ ಹಾಗೂ ಆನ್‌ಲೈನ್‌ ಕೊಂಡಿ www.rangayana.orgನಲ್ಲಿ ಪಡೆಯಲು ಅವಕಾಶ ನೀಡಲಾಗಿತ್ತು.

‘ಭೈರಪ್ಪ ಅವರ ಕಾದಂಬರಿಗೆ ದೊಡ್ಡದಾದ ಬಳಗವಿದೆ. ಮೈಸೂರಿನಲ್ಲಿ ಈ ನಾಟಕದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ನಿರೀಕ್ಷೆಯಂತೆ ಇಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಟಿಕೆಟ್‌ಗಳನ್ನು ಖರೀದಿ ಮಾಡಿದಂತೆ ನಾಟಕದ ಟಿಕೆಟ್‌ಗಳನ್ನು ಖರೀದಿಸಿರುವುದು ಸಂತಸದ ಸಂಗತಿ. ಜನರ ಈ ಸ್ಪಂದನೆ ಹೊಸ ಭರವಸೆ ಮೂಡಿಸಿದೆ.ಈ ನಾಟಕ ಪ್ರದರ್ಶನದಿಂದಕಲಾಕ್ಷೇತ್ರಕ್ಕೂ ಹೊಸ ಕಳೆ ಬರಲಿದೆ’ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT