ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಬಲೆಗೆ ಪಿಡಿಒ, ಕಂಪ್ಯೂಟರ್‌ ಆಪರೇಟರ್‌

ಕೂಲಿ ಹಣಕ್ಕಾಗಿ ಪಂಚಾಯ್ತಿ ಸದಸ್ಯನ ಬಳಿ ಲಂಚಕ್ಕೆ ಬೇಡಿಕೆ
Last Updated 10 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ಕೆಲಸ ಮಾಡಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಕುಟುಂಬಕ್ಕೆ ಕೂಲಿ ನೀಡಲು ಲಂಚಕ್ಕೆ ಬೇಡಿಕೆ ಇರಿಸಿ ಹಣ ಪಡೆಯುತ್ತಿದ್ದ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಜಾನಕಲ್‌ ಗ್ರಾಮ ಪಂಚಾ ಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಕಂಪ್ಯೂಟರ್‌ ಆಪರೇಟರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪಿಡಿಒ ಕೆ. ಶ್ರೀನಿವಾಸ್‌ ಹಾಗೂ ಕಂಪ್ಯೂಟರ್‌ ಆಪರೇಟರ್‌ ಟಿ. ಚನ್ನಬಸಪ್ಪ ಸಿಕ್ಕಿಬಿದ್ದವರು.

ಜಾನಕಲ್‌ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಭೀಮಪ್ಪ ಅವರಿಂದ ಗುರುವಾರ ರಾತ್ರಿ ₹ 4,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಲಂಚದ ರೂಪದಲ್ಲಿ ಪಡೆದ ಹಣವನ್ನು ಜಪ್ತಿ ಮಾಡಲಾಗಿದೆ.

ನರೇಗಾ ಅಡಿ ನಡೆದ ಕಾಮ ಗಾರಿ ಯಲ್ಲಿ ಭೀಮಪ್ಪ ಅವರ ಕುಟುಂಬದ ಸದಸ್ಯರು ಕೆಲಸ ಮಾಡಿದ್ದರು. ಕೂಲಿಯ ಹಣದಲ್ಲಿ ಅರ್ಧ ಬಿಡುಗಡೆ ಮಾಡಿದ ಶ್ರೀನಿವಾಸ್‌, ಉಳಿದ ಮೊತ್ತ ಬಿಡುಗಡೆ ಮಾಡಲು ಲಂಚ ನೀಡುವಂತೆ ಪೀಡಿಸುತ್ತಿ
ದ್ದರು. ಮೂಡ್ಲಭೋವಿಹಟ್ಟಿಯ ಸರ್ಕಾರಿ ಶಾಲೆಯ ಕಾಂಪೌಂಡ್‌ ನಿರ್ಮಾಣದ ಕಾಮಗಾರಿಯ ವಿಚಾರದಲ್ಲೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಭೀಮಪ್ಪ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT