ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರಗಾಮಿ ಸಿದ್ಧಾಂತ ಬೆಂಬಲಿಸುವ ಸಣ್ಣ ಸುಳಿವೂ ಪಿಎಫ್‌ಐ ವೆಬ್‌ಸೈಟ್‌ನಲ್ಲಿ ಇಲ್ಲ

Last Updated 6 ಅಕ್ಟೋಬರ್ 2022, 19:48 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ವೆಬ್‌ಸೈಟ್‌ (http://www.popularfrontindia.org/) ಅನ್ನು ಬಹಳ ಯೋಜಿತವಾಗಿ ರಚಿಸಲಾಗಿದ್ದು, ತುಂಬಾ ಜಾಣ್ಮೆಯಿಂದಅದನ್ನು ನಿರ್ವಹಿಸಲಾಗುತ್ತಿತ್ತು. ಉಗ್ರಗಾಮಿ ಸಿದ್ಧಾಂತದ ಪರ ಒಲವು ಹೊಂದಿರುವ ಅಥವಾ ಅದನ್ನು ಬೆಂಬಲಿಸುವ ಕುರಿತ ಸಣ್ಣ ಸುಳಿವೂ ಅದರಲ್ಲಿ ಸಿಕ್ಕಿಲ್ಲ’ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

‘ಪಿಎಫ್‌ಐ ವೆಬ್‌ಸೈಟ್‌ ತುಂಬಾ ರಚನಾತ್ಮಕವಾಗಿದೆ. ಅದನ್ನು ಎಲ್ಲಾ ಆಯಾಮಗಳಿಂದಲೂ ಆಲೋಚಿಸಿ ರಚಿಸಿದಂತಿದೆ’ ಎಂದು ಸಂಘಟನೆಯ ಚಲನವಲನಗಳ ಮೇಲೆ ನಿಗಾ ಇಟ್ಟಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಂಘಟನೆಯು ಉಗ್ರಗಾಮಿ ಸಿದ್ಧಾಂತವನ್ನು ಅನುಸರಿಸುತ್ತಿತ್ತು ಹಾಗೂ ಅದನ್ನು ಪ್ರಚಾರ ಮಾಡುತ್ತಿತ್ತು ಎಂಬುದನ್ನು ನಿರೂಪಿಸಲು ಬೇಕಿರುವ ಸಣ್ಣ ಸುಳಿವೂ ವೆಬ್‌ಸೈಟ್‌ನಲ್ಲಿ ದೊರೆತಿಲ್ಲ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಆದೇಶದ ಮೇರೆಗೆ ಈ ವೆಬ್‌ಸೈಟ್‌ ಅನ್ನು ಈಗಾಗಲೇ ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT