ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ ಸಾಧಕರು’ ಪ್ರಶಸ್ತಿ ಪ್ರದಾನ ನಾಳೆ

ವಿವಿಧ ಕ್ಷೇತ್ರಗಳ 23 ಸಾಧಕರಿಗೆ ಗೌರವ
Last Updated 22 ಫೆಬ್ರುವರಿ 2023, 23:15 IST
ಅಕ್ಷರ ಗಾತ್ರ

ಬೆಂಗಳೂರು: ತೆರೆಮರೆಯಲ್ಲಿದ್ದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಕೆಲಸ ಮಾಡುತ್ತಿರುವ 23 ಸಾಧಕರನ್ನು ‘ಪ್ರಜಾವಾಣಿ’ ಗುರುತಿಸಿದ್ದು, ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಬ್ಬನ್ ಉದ್ಯಾನದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಮೈಸೂರು ಸ್ಯಾಂಡಲ್), ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರೂ ಆಗಿರುವ ಚನ್ನಗಿರಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ, ಧಾರಾವಾಹಿ ಹಾಗೂ ಸಿನಿಮಾ ನಿರ್ದೇಶಕ ಟಿ.ಎನ್. ಸೀತಾರಾಂ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ.ಮಹೇಶ್ ಎಂ. ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಷಡಾಕ್ಷರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಾಧಕರನ್ನು ಸನ್ಮಾನಿಸಲಿದ್ದಾರೆ.

ಸಾಹಿತ್ಯ, ಕಲೆ, ವಿಜ್ಞಾನ, ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾ ಪುರ ಹಾಗೂ ರಾಮನಗರ ಜಿಲ್ಲೆಯ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡ ಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದ ಸಾಧಕರು: ಬೆಂಗ ಳೂರಿನ ಮಂಸೋರೆ (ಸಿನಿಮಾ), ಬಿ.ಎನ್. ವಿಸ್ಮಯಾ, ಪಲ್ಲವಿ ಗೋಪಿನಾಥ್, ಪ್ರಾರ್ಥನಾ ಭಟ್ (ನವೋದ್ಯಮ), ವಸಂತ ಶೆಟ್ಟಿ (ತಂತ್ರಜ್ಞಾನ), ವಿಜಯ್‌ ನಿಶಾಂತ್‌ (ಪರಿಸರ), ಮೇಘನಾ ಜೈನ್ (ನವೋದ್ಯಮ), ಮಾಲಾ ರಂಗಸ್ವಾಮಿ (ಕ್ರೀಡೆ), ಒ.ಸಿ. ಅನುಷಾ (ಕ್ರೀಡೆ), ಎಲ್‌.ವೈ. ರಾಜೇಶ್ (ಸಮಾಜಸೇವೆ), ಕೆ.ವಿ.ಗುರುರಾಜ್‌ (ವಿಜ್ಞಾನ), ರೂಮಿ ಹರೀಶ್ (ಸಾಮಾಜಿಕ ಹೋರಾಟ), ರಂಜನಿ ರಾಘವನ್ (ಕಿರುತೆರೆ), ದಾದಾಪೀರ್ ಜೈಮನ್ (ಸಾಹಿತ್ಯ), ಅನೀಶ್ ಗೌಡ (ಕ್ರೀಡೆ), ಕೀರ್ತಿ ರಂಗಸ್ವಾಮಿ ಸಿ. (ಕ್ರೀಡೆ) ಹಾಗೂ ಮುರಳಿ ಮೋಹನ್ (ಉದ್ಯಮ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತುಮಕೂರಿನ ನಹಿದಾ ಜಮ ಜಮ್ (ಆಡಳಿತ), ಮಂಜಮ್ಮ ಎಸ್. ಬಾಲಯ್ಯ (ಮಹಿಳಾ ಸಬಲೀಕರಣ), ಕೋಲಾರದ ರಾಧಾಮಣಿ ಎಂ.ವಿ. (ಸಮಾಜ ಸೇವೆ), ಚಿಕ್ಕಬಳ್ಳಾ ಪುರದ ಗಣಪತಿ ಶಾಸ್ತ್ರಿ (ಆಡಳಿತ), ಬೆಂಗಳೂರು ಗ್ರಾಮಾಂತರದ ಅರುಣ್‌ ಕುಮಾರ್ (ಕಲೆ), ರಾಮನಗರದ ಎಚ್‌.ಸಿ. ಚಂದ್ರಶೇಖರ್ (ಪರಿಸರ ಸಂರಕ್ಷಣೆ), ಶಿವಲಿಂಗ ಶೆಟ್ಟಿ (ಸಮಾಜ ಸೇವೆ) ಹಾಗೂ ರವಿಕುಮಾರ್ ಕಂಚನ ಹಳ್ಳಿ (ಮಾಹಿತಿ ಹಕ್ಕು ಹೋರಾಟ) ಅವರು ‘ಪ್ರಜಾವಾಣಿ ಸಾಧಕರು’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

****

ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸು ವುದು ಸಮಾಜಕ್ಕೆ ನೀಡುವ ಒಳ್ಳೆಯ ಸಂದೇಶ. ಅಂತಹ ಕೆಲಸವನ್ನು ನಾಡಿನ ಹೆಸರಾಂತ ಪತ್ರಿಕೆ ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಕೆ.ಮಾಡಾಳ್‌ ವಿರೂಪಾಕ್ಷಪ್ಪ,

-ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT