ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ಗಣಪತಿ ಶಾಸ್ತ್ರಿ - ಜನಮನ ಸೆಳೆದ ತಹಶೀಲ್ದಾರ್

Last Updated 1 ಜನವರಿ 2023, 5:39 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು : ಗಣಪತಿ ಶಾಸ್ತ್ರಿ,
ವೃತ್ತಿ : ತಹಶೀಲ್ದಾರ್
ಸಾಧನೆ : ಸಾರ್ವಜನಿಕ ಸೇವೆ

ಗಣಪತಿ ಶಾಸ್ತ್ರಿ ತಾವು ಹೋದಲ್ಲೆಲ್ಲ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಅಧಿಕಾರಿ. ಸದ್ಯ ಚಿಕ್ಕಬಳ್ಳಾಪುರ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಈ ಹಿಂದೆ ಯಲ್ಲಾಪುರ, ಹೊನ್ನಾವರ, ಬೆಳ್ತಂಗಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಗಣಪತಿ ಶಾಸ್ತ್ರಿ ಅವರು 15 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಕೆಲಸ ಮಾಡಿದ್ದಾರೆ. ಸೇನೆಯಿಂದ ನಿವೃತ್ತರಾಗಿ ಬಳಿಕ ಆರೂವರೆ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ತಹಶೀಲ್ದಾರ್‌ ಆದರು.

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಂಚೆ ಮತಪೆಟ್ಟಿಗೆಯನ್ನು ತಲೆಯಲ್ಲಿ ಹೊತ್ತು ಸಾಗಿದ್ದು ಮತ್ತು ನೆರೆಯಿಂದ ಹಾನಿಗೀಡಾದ ಚಾರ್ಮಾಡಿ ಅರಣ್ಯ ಪ್ರದೇಶದೊಳಗಿನ ಬಾಂಜಾರು ಮಲೆಗೆ ಸಂಪರ್ಕ ಕಲ್ಪಿಸಲಾದ ಕೃತಕ ಮರದ ಸೇತುವೆಯಲ್ಲಿ ಅಕ್ಕಿಮೂಟೆಯನ್ನು ಹೊತ್ತೊಯ್ದು ಸಂತ್ರಸ್ತರಿಗೆ ನೀಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅವರ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು.

ತಮ್ಮ ಕೆಲಸ ಕಾರ್ಯಗಳಿಂದ ‌ಚಿಕ್ಕಬಳ್ಳಾಪುರ ತಾಲ್ಲೂಕಿನ ಜನರಷ್ಟೇ ಅಲ್ಲ ಜಿಲ್ಲೆಯ ಜನರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸರಳ ಮತ್ತು ಪ್ರಾಮಾಣಿಕ ಅಧಿಕಾರಿ ಎನ್ನುವ ಪ್ರಶಂಸೆ ಜನರಿಂದ ದೊರೆಯುತ್ತಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಅಕ್ರಮ ಭೂ ಒತ್ತುವರಿಗಳ ವಿರುದ್ಧ ಕ್ರಮ, ನಕಾಶೆಗಳಲ್ಲಿ ರಸ್ತೆಗಳಿದ್ದರೂ ಅವುಗಳನ್ನು ಒತ್ತುವರಿ ಮಾಡಿಕೊಂಡಿದ್ದವರಿಂದ ಒತ್ತುವರಿ ತೆರವು, ಚಿಕ್ಕಬಳ್ಳಾಪುರ ನಗರದಲ್ಲಿ ಒತ್ತುವರಿ ಆಗಿರುವ ಪ್ರಮುಖ ಸ್ಥಳಗಳನ್ನು ಗುರುತಿಸಿ ನಗರಸಭೆಗೆ ವರದಿ ನೀಡಿರುವುದು, ತಾಲ್ಲೂಕು ಆಡಳಿತವನ್ನು ಜನಸ್ನೇಹಿಯಾಗಿ ರೂಪಿಸುತ್ತಿರುವುದು ಅವರ ಕೆಲಸಕ್ಕೆ ಕೆಲವು ನಿದರ್ಶನ.‌ ರೈತರಿಂದ ಯಾವುದೇ ದೂರು ಬಂದರೂ ಅವುಗಳ ಪರಿಹಾರದ ವಿಚಾರದಲ್ಲಿ ಖುದ್ದಾಗಿ ಕ್ರಮವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT