ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಸಂಕ್ರಾಂತಿ: ವಿಜೇತರ ಆಯ್ಕೆ ಮಾ.18ರಂದು

* ಸ್ಪರ್ಧೆಗೆ ಬಂದಿದ್ದವು 1500ಕ್ಕೂ ಅಧಿಕ ಪ್ರವೇಶಗಳು * ಪ್ರಶಸ್ತಿ ಸುತ್ತಿನಲ್ಲಿ ಆರು ಕವಿತೆಗಳು
Last Updated 6 ಮಾರ್ಚ್ 2023, 21:09 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ಯು ಅಮೃತ ಮಹೋತ್ಸವದ ಸಂಭ್ರಮದಲ್ಲಿ ‘ವೀರಲೋಕ’ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ‘ಕಾವ್ಯ ಸಂಕ್ರಾಂತಿ–2023’ ಸ್ಫರ್ಧೆಯ ಅಂತಿಮ ಸುತ್ತಿಗೆ ಆರು ಕವಿತೆಗಳು ಆಯ್ಕೆಯಾಗಿವೆ.

ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಬಹುಮಾನದ (₹50 ಸಾವಿರ) ಈ ಕವನ ಸ್ಪರ್ಧೆಗೆ 1,500ಕ್ಕೂ ಅಧಿಕ ಕವನಗಳು ಬಂದಿದ್ದವು. ಈ ಪೈಕಿ, ಫಾಲ್ಗುಣ ಗೌಡ ಅಚವೆ (ಅಂಕೋಲ) ಅವರ ‘ದಣಪೆ’, ಸಂಧ್ಯಾ ಹೆಗಡೆ (ಬೆಂಗಳೂರು) ಅವರ ‘ರಂಗಸ್ಥಳ’, ಶಾಂತಾಕುಮಾರಿ (ಬೆಂಗಳೂರು) ಅವರ ‘ಬಾರು ಡಾನ್ಸರು’, ಸುಧಾ ಅಡುಕಳ (ಉಡುಪಿ) ಅವರ ‘ಹಕ್ಕಿ ಮತ್ತು ಹುಡುಗಿ’, ರಂಜನೀ ಕೀರ್ತಿ (ಬೆಂಗಳೂರು) ಅವರ ‘ತಥಾಸ್ತು’ ಮತ್ತು ದೀಪಾ ಹಿರೇಗುತ್ತಿ (ಚಿಕ್ಕಮಗಳೂರು) ಅವರ ‘ಆಕ್ರಮಣ’ ಕವನಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.

ಬೆಂಗಳೂರಿನ ಸರ್ಕಾರಿ ನೌಕರರ ಭವನದಲ್ಲಿ ಮಾರ್ಚ್‌ 18ರಂದು ಸಂಜೆ 4 ಗಂಟೆಗೆ ಈ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಅಂತಿಮ ಸುತ್ತಿಗೆ ಆಯ್ಕೆಯಾದ ಕವನಗಳ ಪೈಕಿ ಮೊದಲ ಬಹುಮಾನ ಪಡೆದ ಕವನ ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಕವನಗಳ ಘೋಷಣೆ ಇದೇ ಕಾರ್ಯಕ್ರಮದಲ್ಲಿ ಆಗಲಿದೆ. ಇದೇ ಸಂದರ್ಭದಲ್ಲಿ ಕಾವ್ಯಗೋಷ್ಠಿಯೂ ನಡೆಯಲಿದೆ.

ಮೊದಲ ಬಹುಮಾನ ಪಡೆದ ಕವನಕ್ಕೆ ₹50 ಸಾವಿರ ಬಹುಮಾನ ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಕವನಗಳಿಗೆ ತಲಾ ₹5 ಸಾವಿರ ಬಹುಮಾನವಿದೆ. ಹಿರಿಯ ಕವಿಗಳಾದ ಎಚ್‌.ಎಸ್‌.ವೆಂಕಟೇಶಮೂರ್ತಿ ಹಾಗೂ ಸವಿತಾ ನಾಗಭೂಷಣ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT