ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಕೋವಿಡ್-19 ಪರಿಹಾರ ನಿಧಿ

Last Updated 14 ಜೂನ್ 2021, 16:02 IST
ಅಕ್ಷರ ಗಾತ್ರ

ಆಸ್ಪತ್ರೆಗಳ ಮುಂದೆ ಏದುಸಿರು ಬಿಡುವ ರೋಗಿಗಳನ್ನು ಹೊತ್ತುನಿಂತ ಆಂಬುಲೆನ್ಸ್‌ಗಳು, ಆಪ್ತರ ಜೀವ ಉಳಿಸಲು ಪ್ರಾಣವಾಯುವಿಗಾಗಿ ಅಂಗಲಾಚುವವರು, ಚಿತಾಗಾರಗಳ ಮುಂದೆ ಸಾಲು ಸಾಲು ಮೃತದೇಹಗಳು...

ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಇಂತಹದ್ದೇ ಹೃದಯವಿದ್ರಾವಕ ನೋಟಗಳು. ಕೋವಿಡ್‌–19 ಕಾಣಿಸಿಕೊಂಡ ದಿನದಿಂದ ಇಲ್ಲಿಯವರೆಗೂ 27.71 ಲಕ್ಷಕ್ಕೂ ಅಧಿಕ ಜನ ಕಾಯಿಲೆಪೀಡಿತರಾಗಿದ್ದು, ಸುಮಾರು33 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಅಂಕಿ–ಸಂಖ್ಯೆಗಳು ಅಧಿಕೃತ ಮಾಹಿತಿಯಷ್ಟೆ. ನೈಜ ಚಿತ್ರಣ ಇನ್ನೂ ಕರಾಳವಾಗಿದೆ. ಎರಡನೇ ಅಲೆ ಪ್ರಾರಂಭವಾಗಿ ಈಗಾಗಲೇ ಎರಡು ತಿಂಗಳಿಗೂ ಅಧಿಕ ಸಮಯ ಕಳೆದಿದೆ.

ಕಳೆದ ವರ್ಷ ಲಾಕ್‌ಡೌನ್‌ ಆದಂತಹ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆಯ ವೇಳೆ ಪ್ರತೀ ಹತ್ತು ಜನರಲ್ಲಿ ಏಳು ಜನರು ನಿರುದ್ಯೋಗಿಗಳಾಗಿದ್ದರು. ಈ ಪಿಡುಗು ಆರಂಭವಾದಾಗಿನಿಂದ ಕನಿಷ್ಠ ಒಂದು ಲಕ್ಷ ಮಹಿಳಾ ಗಾರ್ಮೆಂಟ್‌ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೋವಿಡ್‌ನ ಮೊದಲನೇ ಅಲೆಯ ಹೊಡೆತದ ಈ ಅಂಕಿ ಅಂಶಗಳು, ಅಸಂಘಟಿತ ವಲಯದ ಕಾರ್ಮಿಕರು ಮತ್ತೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ದಾರುಣ ಸನ್ನಿವೇಶದ ಕಿರುಚಿತ್ರಣವನ್ನು ನೀಡಬಲ್ಲವು.

ಇಂತಹ ಸನ್ನಿವೇಶದಲ್ಲಿ, ಕೋವಿಡ್‌ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಿಗೆ ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ‘ಪ್ರಜಾವಾಣಿ’ ಪತ್ರಿಕೆಗಳು ಬೆಂಬಲ ನೀಡಲು ನಿರ್ಧರಿಸಿವೆ. ನೀವು ನೀಡುವ ಪ್ರತಿಯೊಂದು ದೇಣಿಗೆಯೂ ಸಂಕಷ್ಟಕ್ಕೆ ಒಳಗಾಗಿರುವ ಅರ್ಹ ಫಲಾನುಭವಿಗೆ ನೇರವಾಗಿ ಸೇರಿ, ಅವರ ಕಣ್ಣೀರು ಒರೆಸಲು ನೆರವಾಗಲಿದೆ.

₹ 1000 ಮತ್ತು ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡಿದವರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ 80ಜಿ ಅನ್ವಯ ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ.

ಹೀಗಾಗಿ, ನಿಮ್ಮ ಕೈಲಾದ ದೇಣಿಗೆಯನ್ನು (ಅದರ ಪ್ರಮಾಣ ಎಷ್ಟೇ ಇರಲಿ) ನೀಡಿ ಸಂಕಷ್ಟದಲ್ಲಿ ಸಿಲುಕಿದವರ ಬೆಂಬಲಕ್ಕೆ ನಿಲ್ಲುವ ಮಾನವೀಯ ಕಾರ್ಯದಲ್ಲಿ ಕೈಜೋಡಿಸುವಂತೆ ಕೋರುತ್ತೇವೆ.

ದೇಣಿಗೆಯನ್ನು ಹೀಗೆ ಮಾಡಬಹುದು:

ಬ್ಯಾಂಕ್‌ನಿಂದ ವರ್ಗಾಯಿಸುವವರು ಅಥವಾ ಚೆಕ್ ಮೂಲಕ ಪಾವತಿಸುವವರು ಹೀಗೆ ಮಾಡಿ: DECCANHERALD-PRAJAVANI RELIEF TRUST, Canara Bank, Cantonment Branch; A/C No. 0404101200385, IFSC: CNRB0000404. Account Type: Savings Account.

ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ, ಇ-ವ್ಯಾಲೆಟ್ ಅಥವಾ ನೆಟ್‌ಬ್ಯಾಂಕಿಂಗ್ ಮೂಲಕ ಪಾವತಿಸುವವರು ಈ ಲಿಂಕ್ ಕ್ಲಿಕ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT