ಶನಿವಾರ, ಜೂನ್ 25, 2022
28 °C

ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಕೋವಿಡ್-19 ಪರಿಹಾರ ಟ್ರಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಭದ ಉದ್ದೇಶವಿಲ್ಲದ ಸಂಸ್ಥೆಗಳಲ್ಲಿ ಮನವಿ

ಕೋವಿಡ್‌ ಸಾಂಕ್ರಾಮಿಕದಿಂದ ಮುರಿದ ಬದುಕನ್ನು ಮತ್ತೆ ಕಟ್ಟಬೇಕಾಗಿರುವ ಕಾಲಘಟ್ಟ ಇದು. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ ಪರಿಹಾರ ಟ್ರಸ್ಟ್‌’ ಸಹ ಈ ನಿಟ್ಟಿನಲ್ಲಿ ನಮ್ಮ ಗೌರವಾನ್ವಿತ ಓದುಗರಿಂದ ದೇಣಿಗೆ ಸಂಗ್ರಹಿಸಿದೆ. ಈ ದೇಣಿಗೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು, ಕೋವಿಡ್–19  ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ, ಅಸಹಾಯಕರಿಗೆ ಜೀವನೋಪಾಯದ ದಾರಿ ತೋರುವ ಕೆಲಸದಲ್ಲಿ ನಿರತವಾಗಿರುವ ಹಾಗೂ ಲಾಭದ ಉದ್ದೇಶವಿಲ್ಲದಂತಹ ಸಂಸ್ಥೆಗಳು ಮುಂದೆ ಬರಬೇಕು ಎಂದು ಮನವಿ ಮಾಡುತ್ತಿದ್ದೇವೆ.

ಅಗತ್ಯ ಇರುವವರಿಗೆ ಹಣಕಾಸಿನ ಸಹಾಯ ನೀಡುವುದು, ನೆರವಿನಹಸ್ತವನ್ನು ಚಾಚುವುದು ಮತ್ತು/ಅಥವಾ ಕೋವಿಡ್‌ನಿಂದಾಗಿ ತೊಂದರೆಗೆ ಒಳಗಾದವರಿಗೆ ಆಸ್ಪತ್ರೆ, ತುರ್ತು ಶಿಬಿರ ಸ್ಥಾಪಿಸುವುದು ಇಲ್ಲವೆ ಆರೋಗ್ಯ ಸೇವೆಯನ್ನು ಒದಗಿಸುವುದು – ಇಂತಹ ಉದ್ದೇಶಗಳನ್ನು ಈ ಸಂಸ್ಥೆಗಳು ಹೊಂದಿರಬೇಕು. ಅಲ್ಲದೆ, ಆದಾಯ ತೆರಿಗೆ ಕಾಯ್ದೆ–1961ರ ಸೆಕ್ಷನ್ 80 ಜಿ ಅಡಿಯಲ್ಲಿ ಮಾನ್ಯತೆಯನ್ನೂ ಪಡೆದಿರಬೇಕು.

ನಿಮ್ಮ ಸಂಸ್ಥೆಯು ಈ ಬಗೆಯದಾಗಿದ್ದರೆ,dept.finc@printersmysore.co.in ಈ ಇ–ಮೇಲ್ ವಿಳಾಸವನ್ನು ಸಂಪರ್ಕಿಸಬಹುದು. ಸಂಸ್ಥೆಯ ಉದ್ದೇಶ ಪರಿಶೀಲಿಸಲು ಹಾಗೂ ನಮ್ಮ ಗೌರವಾನ್ವಿತ ಓದುಗರಿಂದ ಸಂಗ್ರಹಿಸಲಾಗಿರುವ ಹಣವನ್ನು ವರ್ಗಾವಣೆ ಮಾಡಲು ಅನುವಾಗಲು, 80 ಜಿ ಅಡಿಯಲ್ಲಿ ನಿಮ್ಮ ಸಂಸ್ಥೆಗೆ ಇರುವ ವಿನಾಯಿತಿಗೆ ಸಂಬಂಧಿಸಿದ ದಾಖಲೆ, ಟ್ರಸ್ಟ್ ಡೀಡ್/ಎಂಒಎ ಪ್ರತಿಗಳನ್ನು ಮೇಲ್‌ ಜೊತೆ ಕಳುಹಿಸಲು ಮನವಿ.

ಕೋವಿಡ್–19 ಪರಿಹಾರ ಹಾಗೂ ಜೀವನೋಪಾಯ ಕಟ್ಟಿಕೊಡಲು ಕೆಲಸ ಮಾಡುವ ಸಂಸ್ಥೆಗಳಿಗೆ ಹಣ ನೀಡುವ ವಿಚಾರದಲ್ಲಿ ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ ಪರಿಹಾರ ಟ್ರಸ್ಟ್‌’ನ ತೀರ್ಮಾನವೇ ಅಂತಿಮ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು