ಮಂಗಳವಾರ, ಡಿಸೆಂಬರ್ 1, 2020
17 °C

ಪ್ರಜಾವಾಣಿ ನ್ಯೂಸ್‌ ಕ್ವಿಜ್‌ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ನ್ಯೂಸ್‌ ಕ್ವಿಜ್‌

ಬೆಂಗಳೂರು: ಕನ್ನಡದ ವಿಶ್ವಾಸಾರ್ಹ ದಿನಪತ್ರಿಕೆ ‘ಪ್ರಜಾವಾಣಿ’ ಇಂದಿನಿಂದ ‘ಪ್ರಜಾವಾಣಿ ನ್ಯೂಸ್‌ ಕ್ವಿಜ್‌’ ಆರಂಭಿಸುತ್ತಿದೆ. ಡಿಸೆಂಬರ್‌ 27ರವರೆಗೆ ನಡೆಯುವ ಈ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಂಪರ್‌ ಬಹುಮಾನ ಮಾರುತಿ ಸ್ವಿಫ್ಟ್‌ ಕಾರು. ಇತರ ಆಕರ್ಷಕ ಬಹುಮಾನಗಳನ್ನೂ ಗೆಲ್ಲುವ ಸುವರ್ಣಾವಕಾಶವಿದೆ.

ಓದುಗರಿಗೆ ಪ್ರತಿ ವಾರ ವಿಶೇಷ ಬಹುಮಾನ, ದಿನವೂ 20 ಆಕರ್ಷಕ ಬಹುಮಾನಗಳನ್ನೂ ತಮ್ಮದಾಗಿಸಿಕೊಳ್ಳುವ ಅವಕಾಶ ಇದೆ.

ಕ್ವಿಜ್‌ನಲ್ಲಿ ಭಾಗವಹಿಸಲು ಇರುವ ದಾರಿ ಸರಳ. ಸೋಮವಾರದಿಂದ ಶನಿವಾರದವರೆಗೆ ಪತ್ರಿಕೆಯ ಕ್ರೀಡಾಪುಟದಲ್ಲಿ  ಪ್ರಕಟವಾಗುವ ಎರಡು ಸುಲಭ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪ್ರತಿ ಪ್ರಶ್ನೆಗೆ ಮೂರು ಉತ್ತರಗಳ ಆಯ್ಕೆ ಇರುತ್ತದೆ. ಪ್ರತಿ ಭಾನುವಾರ ಐದು ಪ್ರಶ್ನೆಗಳು ಇರುತ್ತವೆ.

ಬಂಪರ್‌ ಬಹುಮಾನ ಗೆಲ್ಲಲು ಭಾನುವಾರ ಪ್ರಕಟವಾಗುವ ಐದು ಕ್ವಿಜ್‌ಗಳ ಜೊತೆಗೆ ಇತರೆ 30 ದಿನಗಳ ಕ್ವಿಜ್‌ಗಳಿಗೂ ಉತ್ತರ ಕಳುಹಿಸಿರಬೇಕು. ವಾಚುಗಳನ್ನು ಗೆಲ್ಲಲು ನಾಲ್ಕು ಭಾನುವಾರದ ಕ್ವಿಜ್‌ಗಳ ಜೊತೆಗೆ ಇತರೆ 24 ದಿನಗಳ ಪ್ರಶ್ನೆಗಳಿಗೆ ಉತ್ತರ ಕಳುಹಿಸಿರಬೇಕು. ವಾಟರ್‌ ಪ್ಯೂರಿಫೈಯರ್‌ ಬಹುಮಾನಕ್ಕೆ ಮೂರು ಭಾನುವಾರದ ಕ್ವಿಜ್‌ಗಳ ಜೊತೆಗೆ 18 ದಿನಗಳ ಪ್ರಶ್ನೆಗಳಿಗೆ ಉತ್ತರಿಸಿರಬೇಕು. ದಿನನಿತ್ಯದ ಬಹುಮಾನ ವಿಜೇತರನ್ನು ಅದೃಷ್ಟದ ‘ಡ್ರಾ’ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇನ್ನೇಕೆ ತಡ, ಬನ್ನಿ ಭಾಗವಹಿಸಿ, ಗೆಲ್ಲಿ. 

ವಿವರಗಳಿಗೆ ಓದಿ: ಪ್ರಜಾವಾಣಿ ಓದಿರಿ ಮತ್ತು ಆಕರ್ಷಕ ಬಹುಮಾನ ಗೆಲ್ಲಿರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು