ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಕಾರಂಜಿ: ಧಾರ್ಮಿಕ ಪಠಣಕ್ಕೆ ಆಕ್ಷೇಪ

Last Updated 28 ಜುಲೈ 2022, 23:25 IST
ಅಕ್ಷರ ಗಾತ್ರ

ಬೆಂಗಳೂರು:ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಧಾರ್ಮಿಕ ಪಠಣ ಸ್ಪರ್ಧೆಗೆ ಅವಕಾಶ ಕಲ್ಪಿಸಿರುವ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ಆದೇಶಕ್ಕೆ ವಿರೋಧ ವ್ಯಕ್ತವಾಗಿದೆ.

ಭಗವದ್ಗೀತೆಯನ್ನು ಕನ್ನಡ ಶಾಲೆಯ ಮಕ್ಕಳು ಸಂಸ್ಕೃತದಲ್ಲಿ ಹಾಗೂ ಉರ್ದು ಶಾಲೆಯ ಮಕ್ಕಳು ಅರೇಬಿಕ್‌ ಭಾಷೆಯಲ್ಲಷ್ಟೆ ಪಠಿಸಲು ಅವಕಾಶ ನೀಡಿರುವುದೂ ಸರಿಯಲ್ಲ.ಯಾವುದೇ ಭಾಷೆಯಲ್ಲಿ ಪಠಣ ಮಾಡಲು ಹಿಂದೆ ಅವಕಾಶ ಕಲ್ಪಿಸಲಾಗಿತ್ತು. ಈಗ ಸಂಸ್ಕೃತಕ್ಕೆ ಆದ್ಯತೆ ನೀಡಿರುವುದುಹಿಂದೂ ಧರ್ಮವನ್ನು ಸಂಸ್ಕೃತಕ್ಕೆ ಸೀಮಿತ ಮಾಡುತ್ತಿರುವ ಹುನ್ನಾರ. ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ರಾಜ್ಯಕ್ಕೆ ಮಾಡಿದ ಅಪಮಾನ ಎಂದು ಅಭಿವೃದ್ಧಿ ಶಿಕ್ಷಣ ತಜ್ಞವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ಚಿಂತಕ ಜಿ.ರಾಮಕೃಷ್ಣ, ಲೇಖಕಿ ವಸುಂಧರಾ ಭೂಪತಿ,ಸಾಮಾಜಿಕ ಕಾರ್ಯಕರ್ತೆ ಮಲ್ಲಿಗೆ, ನಿವೃತ್ತಪ್ರಾಧ್ಯಾಪಕಟಿ. ಆರ್. ಚಂದ್ರಶೇಖರ್,ಪ್ರಯೋಗಶೀಲ ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾ ಲಕೃಷ್ಣ ನಾಯರಿ,ಪೋಷಕರ ಸಮನ್ವಯ ವೇದಿಕೆಯಬಿ.ಎನ್.ಯೋಗಾನಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂವಿಧಾನವು ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವುದರಿಂದ ಸಾರ್ವಜನಿಕ ಸಂಸ್ಥೆಗಳಲ್ಲಿ ಧರ್ಮ ಹಾಗೂ ಸಂಪ್ರದಾಯದ ವಿಷಯಗಳನ್ನು ತರಬಾರದು. ಧಾರ್ಮಿಕ ಪಠಣಗಳ ಬದಲು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ, ಭಾರತದ ಸಂವಿಧಾನ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳಿಂದ ಆಯ್ದ ಪ್ರಸ್ತಾವನೆ, ಪರಿಚ್ಛೇಧ ಅಥವಾ ಹೆಸರಾಂತ ಸಮಾಜ ಸುಧಾರಕರು, ಕವಿಗಳು ಹಾಗೂ ದಾರ್ಶನಿಕರ ಮಾನವನ ಘನತೆ, ಸಮಾನತೆಯನ್ನು ಎತ್ತಿ ಹಿಡಿಯಲು ರಚಿಸಿದ ಪದ್ಯ, ಗದ್ಯ ಅಥವಾ ಕವನ ಗಳಿಂದ ಆಯ್ದ ಸಾಲುಗಳನ್ನು ಪಠಣಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ದೇಶದಲ್ಲಿ ಶಾಲೆಯನ್ನು ಒಂದು ಜಾತ್ಯತೀತ, ಧರ್ಮಾತೀತ ಚೌಕಟ್ಟಿನ ಮಾನವೀಯತೆಯ ತಾಣವನ್ನಾಗಿಸು ವುದು ತುಂಬಾ ಮಹತ್ವದ ವಿಷಯ. ಶಾಲೆಯಲ್ಲಿ ಪ್ರತಿಭಾಕಾರಂಜಿ ಆಯೋ ಜಿಸುವುದು ಮಕ್ಕಳ ಜ್ಞಾನ, ಭಾಷಾ ಕೌಶಲ ಪರಿಶೀಲಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಕ್ಕೆ ಹೊರತು ಧಾರ್ಮಿಕ ಪ್ರಚಾರಕ್ಕಲ್ಲ. ಧಾರ್ಮಿಕ ಪಠಣ ಸ್ಪರ್ಧೆ ಮಾಡಲೇಬೇಕೆಂದರೆ ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್‌, ಹಿಂದೂ ಹಾಗೂ ಲಿಂಗಾಯಿತ ಧರ್ಮಗಳ ಗ್ರಂಥ ಗಳಿಂದ ಆಯ್ದ ಅಂಶಗಳ ಧಾರ್ಮಿಕ ಪಠಣವಿರಬೇಕು. ಇದು ಸರ್ವಧರ್ಮ ಸಮನ್ವಯಕ್ಕೆ ಭೂಮಿಕೆ ಕಲ್ಪಿಸುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT