ರಾಷ್ಟ್ರಪತಿ ಚುನಾವಣೆ: ಕರ್ನಾಟಕದಲ್ಲಿ ಸಂಪೂರ್ಣ ಮತದಾನ

ಬೆಂಗಳೂರು: ನೂತನ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ರಾಜ್ಯದ ಎಲ್ಲ ಶಾಸಕರೂ ಮತ ಚಲಾಯಿಸಿದರು. ಸಂಸದರಾದ ವಿ. ಶ್ರೀನಿವಾಸ ಪ್ರಸಾದ್, ಎಚ್.ಡಿ. ದೇವೇಗೌಡ ಕೂಡ ಬೆಂಗಳೂರಿನಲ್ಲಿಯೇ ಹಕ್ಕು ಚಲಾಯಿಸಿದ್ದು, ಒಟ್ಟು 226 ಮತಗಳ ಚಲಾವಣೆಯಾಗಿದೆ.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮೊದಲಿಗರಾಗಿ ಮತ ಚಲಾವಣೆ ಮಾಡಿದರು. ಬಳಿಕ ಉಳಿದ ಶಾಸಕರು ಸರದಿಯೋಪಾದಿಯಲ್ಲಿ ಬಂದು ಮತ ಚಲಾಯಿಸಿದರು. ನಿಗದಿತ ಅವಧಿಗೂ ಮೊದಲೇ ಎಲ್ಲರೂ ಮತದಾನ ಮಾಡಿದರು. ರಾತ್ರಿ 9.20ಕ್ಕೆ ವಿಮಾನದ ಮೂಲಕ ಮತಪೆಟ್ಟಿಗೆಯನ್ನು ದೆಹಲಿಗೆ ಕೊಂಡೊಯ್ಯಲಾಯಿತು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಶೇ 99.12ರಷ್ಟು ಮತದಾನ, ಜುಲೈ 21ರಂದು ಫಲಿತಾಂಶ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.