ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರೇಂದ್ರ ಹೆಗ್ಗಡೆ ವಿರುದ್ಧದ ಆರೋಪ ಸತ್ಯಕ್ಕೆ ದೂರ: ಎಂ.ಕೃಷ್ಣಮೂರ್ತಿ

Last Updated 31 ಮಾರ್ಚ್ 2021, 21:10 IST
ಅಕ್ಷರ ಗಾತ್ರ

ಬೆಂಗಳೂರು: ‘ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ’ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು’ ಎಂದುಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಗುರುವಾಯನಕೆರೆಯ ಸೋಮನಾಥ್ ನಾಯಕ್ ಅವರು ಕೆಲ ದಿನಗಳ ಹಿಂದೆ ಧರ್ಮಸ್ಥಳದ ಜಮೀನಿನ ಕುರಿತು ಆಧಾರ ರಹಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾಡಿರುವ ಆರೋಪ ಖಂಡನೀಯ’ ಎಂದರು.

‘ಸೋಮನಾಥ್ ಅವರಿಗೆ ಸತ್ಯಾಂಶ ತಿಳಿಯಪಡಿಸುವ ಉದ್ದೇಶದಿಂದ ಧರ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲ ಜಮೀನು ಪಹಣಿಗಳ1970ರಿಂದ 2021ರವರೆಗಿನ ಸ್ಥಿತಿಗತಿಯನ್ನು ತಿಳಿಯಲು ದಾಖಲೆಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಎಲ್ಲ ಜಮೀನು ದೇವರ ಹೆಸರಿನಲ್ಲಿದ್ದು, ಯಾವುದೇ ಆಸ್ತಿವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಬರೆಸಿಕೊಂಡಿರುವುದು ಪತ್ತೆಯಾಗಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ಬೆಳ್ತಂಗಡಿಯ ಭೂ-ನ್ಯಾಯ ಮಂಡಳಿಯ ಆದೇಶದ ಪ್ರತಿಯನ್ನು ಪಡೆದುಕೊಂಡು ಅವಲೋಕಿಸಿದಾಗ, ಅಲ್ಲಿಯೂ ದೇವರ ಹೆಸರಿನಲ್ಲೇ ಆಸ್ತಿ ಪತ್ತೆಯಾಗಿದೆ. ಹೆಗ್ಗಡೆ ಅವರು ಮಿತಿಗಿಂತ ಹೆಚ್ಚಿನ ಆಸ್ತಿಯೂ ಹೊಂದಿಲ್ಲ.ಜಾತ್ಯತೀತ ಮನೋಭಾವದ ಹೆಗ್ಗಡೆ ಅವರೇ ತಮ್ಮಸಾವಿರಾರು ಎಕರೆ ಭೂಮಿಯನ್ನು ಬಡವರಿಗೆ ಹಂಚಿದ್ದಾರೆ. ಇದು, ಆಧಾರರಹಿತ ಆರೋಪ’ ಎಂದರು.

‘ಹೆಗ್ಗಡೆಯವರು ಪರಂಪರಾಗತವಾಗಿ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ ಎಂದುಸುಪ್ರೀಂಕೋರ್ಟ್‌ ಹಾಗೂ ಮೈಸೂರು ನ್ಯಾಯಾಲಯದ ಆದೇಶಗಳಲ್ಲಿ ಉಲ್ಲೇಖವಿದೆ. ಇದನ್ನು,ಸೋಮನಾಥ್ ನಾಯಕ್ ಅವಲೋಕಿಸಿದಂತಿಲ್ಲ’ ಎಂದು ದೂರಿದರು.

‘ಸೋಮನಾಥ್ ಅವರ ಬಗ್ಗೆ ಮಾಹಿತಿ ಕಲೆಹಾಕಿದಾಗ, ಈ ಆರೋಪದ ಹಿಂದೆ ಕಾಣದ ಕೈಗಳ ಪಾತ್ರ ಇರುವ ಶಂಕೆ ವ್ಯಕ್ತವಾಗಿದೆ.ಬಡವರು ಹಾಗೂ ಸರ್ಕಾರವನ್ನು ವಂಚಿಸಿ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ, ಕೋಟಿಗಟ್ಟಲೆ ಲೂಟಿ ಮಾಡಿದ್ದಾರೆ ಎಂಬ ಆರೋಪಗಳೂ ಆ ವ್ಯಕ್ತಿಯ ಮೇಲಿದೆ. ಅನಗತ್ಯ ಆರೋಪದ ದುರುದ್ದೇಶದಿಂದ ಕೂಡಿದ್ದು, ಮತ್ತೊಮ್ಮೆ ಈ ರೀತಿ ನಿರಾಧಾರ ಆರೋಪ ಮಾಡಿದರೆ, ಪರಿಣಾಮ ಎದುರಿಸಬೇಕು’ ಎಂದೂ ಎಚ್ಚರಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್‌ಸಾರ್‌, ಕನ್ನಡಪರ ಸಂಘಟನೆಯ ಶಿವಾನಂದ ಶೆಟ್ಟಿ ಹಾಗೂ ಎನ್.ವಿ.ಲಕ್ಷ್ಮೀನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT