ಶುಕ್ರವಾರ, ಜನವರಿ 27, 2023
26 °C

20 ಕೆಎಎಸ್‌ ಅಧಿಕಾರಿಗಳಿಗೆ ಆಯ್ಕೆ ಶ್ರೇಣಿಗೆ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ಶ್ರೇಣಿಯ 20 ಕೆಎಎಸ್‌ ಅಧಿಕಾರಿಗಳಿಗೆ ಆಯ್ಕೆ ಶ್ರೇಣಿಗೆ ರಾಜ್ಯ ಸರ್ಕಾರ ಗುರುವಾರ ಬಡ್ತಿ ನೀಡಿ ಆದೇಶ ಹೊರಡಿಸಿದೆ.

ಬಡ್ತಿ ಹೊಂದಿದವರು: ಪಿ.ಲಕ್ಷ್ಮಮ್ಮ (ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ),  ಬಿ.ಪಿ.ವಿಜಯ್ (ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ–ಆಡಳಿತ), ಸಿ.ವಿ.ಸ್ನೇಹಾ (ಕೋಲಾರ ಹೆ್ಚ್ಚುವರಿ ಜಿಲ್ಲಾಧಿಕಾರಿ), ಡಿ.ಆರ್.ಅಶೋಕ್ (ಪಾಲಿಕೆ ಜಂಟಿ ಆಯುಕ್ತ–ಯಲಹಂಕ), ಸಯಿದಾ ಆಯಿಷಾ ( ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ), ಆರ್‌.ಪ್ರಶಾಂತ್ (ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ), ಎಸ್.ನಾಗರಾಜು (ಪಾಲಿಕೆ ಜಂಟಿ ಆಯುಕ್ತ–ಆರ್‌.ಆರ್‌.ನಗರ) , ಇಸ್ಲಾವುದ್ದೀನ್‌ ಗದ್ಯಾಳ ( ಹೆಚ್ಚುವರಿ ಪ್ರಾದೇಶಿಕ ಆಯುಕ್ತ, ಬೆಂಗಳೂರು), ರುದ್ರೇಶ್ ಎಸ್‌ ಘಾಳಿ (ಬೀದರ್‌ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ), ಅಶೋಕ ದುಡಗುಂಟಿ (ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ), ಮೇಜರ್ ಸಿದ್ದಲಿಂಗಯ್ಯ ಎಸ್.ಹಿರೇಮಠ (ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ–ಧಾರವಾಡ).

ಕೆ.ಎಚ್.ಜಗದೀಶ್ (ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ), ಎಚ್.ಬಿ.ಬೂದೆಪ್ಪ( ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ), ಬಸವರಾಜು (ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ), ಚನ್ನಬಸಪ್ಪ ಕೆ. (ತುಮಕೂರಿನ ಹೆಚ್ಚುವರಿ ಜಿಲ್ಲಾಧಿಕಾರಿ), ಟಿ.ಯೋಗೀಶ್ (ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ), ಶಾಂತಾ ಎಲ್.ಹುಲ್ಮನಿ (ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕಿ), ಎಚ್.ಪುಷ್ಪಲತಾ (ಸಮಗ್ರ ಮಕ್ಕಳ ರಕ್ಷಣಾ ಯೋಜನಾ ನಿರ್ದೇಶಕಿ), ಜಿ.ಅನುರಾಧಾ (ಹೆಚ್ಚುವರಿ ಜಿಲ್ಲಾಧಿಕಾರಿ ಶಿವಮೊಗ್ಗ), ಸಿ.ಅನಿತಾ (ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕಿ–ಆಡಳಿತ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು