ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜನೆ ವಿರುದ್ಧ ಅಖಂಡ ಬಳ್ಳಾರಿ ಹೋರಾಟ ಸಮಿತಿ ಮುಖಂಡರ ಆಕ್ರೋಶ

ಟೈರ್‌ ಸುಡುವ ಪ್ರಯತ್ನಕ್ಕೆ ಪೊಲೀಸರ ತಡೆ, ತಳ್ಳಾಟ
Last Updated 9 ಫೆಬ್ರುವರಿ 2021, 10:04 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಮಂಗಳವಾರ ಟೈರ್‌ ಸುಟ್ಟು ಪ್ರತಿಭಟಿಸಲು ಪೊಲೀಸರು ಅವಕಾಶ ನೀಡದೇ ಇದ್ದುದಕ್ಕೆ ಅಖಂಡ ಬಳ್ಳಾರಿ ಹೋರಾಟ ಸಮಿತಿಯ ಮುಖಂಡರಲ್ಲಿ ಕೆಲವರುಅಂಗಿ ಬಿಚ್ಚಿ ಅರೆಬೆತ್ತಲೆಯಾಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಭಜನೆ ವಿರುದ್ಧ ಸುದ್ಧಿಗೋಷ್ಠಿ ನಡೆಸಿದ ಬಳಿಕ ವೃತ್ತಕ್ಕೆ ತೆರಳಿದ ಸಮಿತಿಯಕುಡುತಿನಿ ಶ್ರೀನಿವಾಸ್, ದರೂರು ಪುರುಷೋತ್ತಮಗೌಡ, ಸಿದ್ಮಲ್ ಮಂಜುನಾಥ್, ಟೈರ್‌ಗೆ ಹಾಕಲೆಂದು ಒಂದು ಬಾಟಲ್‌ನಲ್ಲಿ ಪೆಟ್ರೋಲ್‌ ತಂದಿದ್ದರು. ಟೈರ್‌ಗೆ ಅದನ್ನು ಸುರಿಯಲು ಮುಂದಾದಾಗ ಪೊಲೀಸರು ಬಾಟಲ್‌ ಅನ್ನು ವಶಕ್ಕೆ ಪಡೆಯಲು ಮುಂದಾರು. ‘ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಆದರೆ ಅವರ ಮಾತನ್ನು ಒಪ್ಪದೆ ಮುಖಂಡರು ಬಲವಂತವಾಗಿಯೇ ಟೈರ್‌ಗೆ ಪೆಟ್ರೋಲ್‌ ಸುರಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಮುಖಂಡರ ನಡುವೆ ವಾಗ್ವಾದ, ತಳ್ಳಾಟವೂ ಏರ್ಪಟ್ಟಿತ್ತು. ಮುಖಂಡರಿಂದ ಬಾಟಲ್‌ ಅನ್ನು ವಶಪಡಿಸಿಕೊಂಡು ಪೊಲೀಸರು, ನಂತರ ಟೈರ್‌ಗಳನ್ನೂ ತೆರವುಗೊಳಿಸಿದರು. ಪ್ರತಿಭಟನೆಗೆ ಅವಕಾಶ ದೊರಕದೇ ಇದ್ದುದಕ್ಕೆ ಮುಖಂಡರಲ್ಲಿ ಕೆಲವರು ಅಂಗಿ ಬಿಚ್ಚಿ ಅರೆಬೆತ್ತಲೆಯಾಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT