ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಭಾವಚಿತ್ರ ತೆರವು: ಅಹವಾಲು ಸಲ್ಲಿಕೆ

Last Updated 29 ಜನವರಿ 2022, 19:45 IST
ಅಕ್ಷರ ಗಾತ್ರ

ರಾಯಚೂರು: ‘ಗಣರಾಜ್ಯೋತ್ಸವದಂದು ನಡೆದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ನ್ಯಾಯಮೂರ್ತಿ ಸಚಿನ್‌ ಮಗ್ದುಮ್‌ ಅವರಿಗೆ ಅಹವಾಲು ಸಲ್ಲಿಸಲಾಯಿತು‘ ಎಂದು ವಕೀಲ ಕರು ಣಾಕರ ಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಸಚಿನ್‌ ಮಗ್ದುಮ್‌ ಅವರು ಶನಿವಾರ ಇಲ್ಲಿಗೆ ಬಂದಿದ್ದರು. 10 ಜನ ವಕೀಲರು ಅವರನ್ನು ಭೇಟಿಯಾಗಿಎಲ್ಲ ನ್ಯಾಯಾಲಯಗಳಲ್ಲಿ ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರ ಅಳವಡಿಸಲು ಹೈಕೋರ್ಟ್‌ ನಿಂದ ಆದೇಶ ನೀಡುವಂತೆ ಕೋರಿದೆವು.ಅದನ್ನು ಹೈಕೋರ್ಟ್‌ ಸಮಿತಿಗೆ ಸಲ್ಲಿಸುವುದಾಗಿ ಅವರು ತಿಳಿಸಿ ದ್ದಾರೆ’ ಎಂದರು.

‘ಗಣರಾಜ್ಯೋತ್ಸವ ಘಟನೆಗೆ ಸಂಬಂಧಿಸಿ ಜಿಲ್ಲಾ ಆಡಳಿತಾತ್ಮಕ ನ್ಯಾಯ ಮೂರ್ತಿ ಕೇಳಿದ ಪ್ರಶ್ನೆಗಳಿಗೆ ವಕೀಲರ ಸಂಘದ ಇಬ್ಬರು ಪದಾಧಿಕಾರಿಗಳು ಮೌಖಿಕವಾಗಿ ವಿವರಿಸಿದ್ದಾರೆ‘ ಎಂದು ರಾಯಚೂರು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ ತಿಳಿಸಿದರು. ’ನ್ಯಾ.ಸಚಿನ್‌ ಮಗ್ದುಮ್‌ ಅವರು ಜಿಲ್ಲಾ ನ್ಯಾಯಾಂಗ ಆಡಳಿತಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಸಭೆ ನಡೆಸಿದರು’ ಎಂದು ಮೂಲ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT