ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಅಕ್ರಮ| ಮಾಜಿ ಎಂಎಲ್‌ಸಿ ಸಂಬಂಧಿಗೂ ಪಂಗನಾಮ

Last Updated 10 ಮೇ 2022, 3:07 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಪರಿಷತ್ ಮಾಜಿ ಸದಸ್ಯರೊಬ್ಬರ ಸಂಬಂಧಿಕರಿಗೆ ಸೇರಿದ್ದ ಮರಳು ಬ್ಲಾಕ್‌ ಪಡೆದು, ಮರಳು ತೆಗೆದಿದ್ದ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಆರೋಪಿ ಸುರೇಶ ಕಾಟೇಗಾಂವ, ಬಳಿಕ ಹಣ ಕೊಡದಿರುವುದು ತಿಳಿದುಬಂದಿದೆ.

‘ನಿಮ್ಮವರ ಮರಳು ಬ್ಲಾಕ್ ನಾವೇ ನಿರ್ವಹಿಸುತ್ತೇವೆ. ಬಂದ ಹಣದಲ್ಲಿ ಪಾಲು ಕೊಡುತ್ತೇವೆ ಎಂದಿದ್ದ. ಹೆಚ್ಚೂ ಕಡಿಮೆ ₹ 1 ಕೋಟಿ ಬರಬೇಕಿದೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯರು ತಮ್ಮ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ. ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸುರೇಶ ಕಾಟೆಗಾಂವ ಮತ್ತು ಸಹೋದರ ಕಾಳಿದಾಸ ಸಿಐಡಿ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT