ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ ತುಪ್ಪ ನಕಲು ತಡೆಯಲು ‘ಕ್ಯೂಆರ್‌ ಕೋಡ್‌’: ಕೆಎಂಎಫ್‌ ನಿರ್ಧಾರ

Last Updated 21 ಡಿಸೆಂಬರ್ 2021, 2:04 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ತುಪ್ಪದ ಪ್ಯಾಕ್‌ಗಳಿಗೆ ಕ್ಯೂಆರ್‌ ಕೋಡ್‌ ಮತ್ತು ಹೊಲೊಗ್ರಾಂ ಅಳವಡಿಸಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಉದ್ದೇಶಿಸಿದೆ.

ಕೆಎಂಎಫ್‌ನ ನಕಲಿ ತುಪ್ಪ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳಲಾಗುತ್ತಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.16ರಂದು ಮೈಸೂರು ಬಳಿಯ ಹೊಸಹುಂಡಿ ಗ್ರಾಮದ ಗೋದಾಮಿನಲ್ಲಿ ನಂದಿನಿ ನಕಲಿ ತುಪ್ಪ ಪತ್ತೆಯಾಗಿತ್ತು. ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ನಂದಿನಿ ತುಪ್ಪ ಕಲಬೆರಕೆಗೆ ಬಳಸುತ್ತಿದ್ದ ಡಾಲ್ಡಾ, ಪಾಮ್‌ ಆಯಿಲ್‌, ಬಣ್ಣ, ಯಂತ್ರಗಳು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಬಳಿಕ, ರಾಜ್ಯದಾದ್ಯಂತ ಪ್ರತಿ ದಿನ ಮಾರುಕಟ್ಟೆಯಲ್ಲಿಲಭ್ಯ ಇರುವ ನಂದಿನಿ ತುಪ್ಪದ ಮಾದರಿಗಳನ್ನು ಪಡೆದು ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲ ಒಕ್ಕೂಟಗಳಲ್ಲಿ ಜಾಗೃತ ದಳ ರಚಿಸಿ ಪರಿಶೀಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಹಕರಿಗೆ ಅನುಮಾನಬಂದರೆ ಕೆಎಂಎಫ್‌ ಕೇಂದ್ರ ಪ್ರಯೋಗಾಲಯದಲ್ಲಿ ಮಾದರಿ ನೀಡಿ
ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಮಾಹಿತಿಗೆ ಟೋಲ್‌ ಫ್ರೀ ಸಂಖ್ಯೆ: 18004258030,

ಇ–ಮೇಲ್‌: customercare.nandini@kmf.coop,
ನಂದಿನಿ ನೆರವು:080–66660000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT