ಬುಧವಾರ, ಮೇ 25, 2022
31 °C

ಆರ್‌ಟಿ–ಪಿಸಿಆರ್ ಕಿಟ್‌ ಬಳಕೆಯ ಮಾಹಿತಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19 ಪರೀಕ್ಷೆಗೆ ಆರ್‌ಟಿ–ಪಿಸಿಆರ್ ಮತ್ತು ರ‍್ಯಾಪಿಡ್‌ ಆಂಟಿಜೆನ್‌ ಕಿಟ್‌ಗಳನ್ನು ಖರೀದಿಸುತ್ತಿರುವ ಗ್ರಾಹಕರ ವಿವರಗಳನ್ನು ಸಂಗ್ರಹಿಸಲು ಔಷಧ ನಿಯಂತ್ರಣ ಇಲಾಖೆ ಮುಂದಾಗಿದೆ.

‘ಕಿಟ್‌ಗಳನ್ನು ಗ್ರಾಹಕರೇ ನೇರವಾಗಿ ಖರೀದಿಸಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದರಿಂದ, ಸೋಂಕು ದೃಢವಾಗಿರುವ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಹೀಗಾಗಿ, ಗ್ರಾಹಕರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ವಿತರಕರು ಮತ್ತು ಔಷಧ ಅಂಗಡಿ ವ್ಯಾಪಾರಿಗಳಿಂದ ಉಪ ಔಷಧ ನಿಯಂತ್ರಕರು ಪಡೆದು ಸಲ್ಲಿಸಬೇಕು’ ಎಂದು ಸುತ್ತೋಲೆ ಹೊರಡಿಸಲಾಗಿದೆ.

‘ವಿವರಗಳನ್ನು ಪ್ರತಿ ದಿನ ಸಂಜೆ 6 ಗಂಟೆ ಒಳಗೆ drkempaiahsuresh@gmail.com ಮತ್ತು dckarnataka@gmail.com ಮೇಲ್‌ಗೆ ಕಳುಹಿಸಬೇಕು’ ಎಂದು ಔಷಧ ನಿಯಂತ್ರಕರು ಸೂಚಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು