ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Viral Video| ‘ರಾ ರಾ ರಕ್ಕಮ್ಮ’ ಹಾಡಿಗೆ ರೇಣುಕಾಚಾರ್ಯ ಭರ್ಜರಿ ಕುಣಿತ

Last Updated 17 ಅಕ್ಟೋಬರ್ 2022, 11:35 IST
ಅಕ್ಷರ ಗಾತ್ರ

ಹೊನ್ನಾಳಿ: ಪೇಟೆ ಹಳದಮ್ಮ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ನಿಮಿತ್ತ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ‘ವಿಕ್ರಾಂತ್‌ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ.

ಕುಣಿತದ ವಿಡಿಯೊವನ್ನು ಸ್ವತಃ ರೇಣುಕಾಚಾರ್ಯ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಜನಸ್ತೋಮದೊಂದಿಗೆ ರೇಣುಕಾಚಾರ್ಯ ಹಾಡಿಗೆ ಹೆಜ್ಜೆ ಹಾಕಿದರು. ಇದನ್ನು ಕಂಡು ಜನರೂ ಸಂಭ್ರಮಗೊಂಡರು.

ಗಣೇಶನನ್ನು ಪ್ರತಿಷ್ಠಾಪಿಸಿದ್ದ ಟ್ರ್ಯಾಕ್ಟರ್‌ನಲ್ಲಿ ಪತ್ನಿ ಸುಮಾ ಅವರನ್ನು ಕೂರಿಸಿದ ಶಾಸಕ ರೇಣುಕಾಚಾರ್ಯ ಸ್ವತಃ ಟ್ರ್ಯಾಕ್ಟರ್ ಚಲಾಯಿಸಿದರು. ಕೇಸರಿ ಧ್ವಜ ಹಿಡಿದ ಸಾವಿರಾರು ಯುವಕರು ರಸ್ತೆಯುದ್ದಕ್ಕೂ ಧ್ವಜವನ್ನು ಬೀಸುತ್ತಾ ನೃತ್ಯ ಮಾಡುತ್ತಿದ್ದುದ್ದು ಕಂಡು ಬಂತು.

ಎರಡು ಡಿಜೆ ಪೈಕಿ ಒಂದನ್ನು ಯುವತಿಯರಿಗೆ ಮೀಸಲಿಡಲಾಗಿತ್ತು. ಯುವತಿಯರ ನೃತ್ಯಕ್ಕೆ ಮಹಿಳೆಯರು ಹಾಗೂ ಪುಟ್ಟ ಮಕ್ಕಳು ಜೊತೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT