ಮಂಗಳವಾರ, ಜುಲೈ 27, 2021
25 °C

ತಿರುಕನ ಕನಸು ಕಾಣುತ್ತಿರುವ ಜಮೀರ್‌: ರೇಣುಕಾಚಾರ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ‘ಶಾಸಕ ಜಮೀರ್ ಅಹಮದ್ ಅವರು ಸಿದ್ದರಾಮಯ್ಯ ಮಾಜಿ ಅಲ್ಲ ಭಾವಿ ಸಿಎಂ ಎಂದು ಹೇಳುವ ಮೂಲಕ ತಿರುಕನ ಕನಸು ಕಾಣುತ್ತಿದ್ದಾರೆ. ಅವರೊಬ್ಬ ಗುಜರಿ ಗಿರಾಕಿ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು.

‘ಜಮೀರ್ ಮುಂದೆ ಶಾಸಕರಾಗುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಅವರೊಬ್ಬ ಕೋಮುವಾದಿ. ವಿಷ ಬೀಜ ಬಿತ್ತುವುದರಲ್ಲಿ ನಿಸ್ಸೀಮರು. ಹಿಂದೊಮ್ಮೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಯ ವಾಚ್‍ಮನ್ ಆಗಿ ಕೆಲಸ ಮಾಡುತ್ತೇನೆ ಎಂದು ಜಮೀರ್ ಹೇಳಿದ್ದರು. ಆದ್ದರಿಂದ ಅವರು ಮೊದಲು ವಾಚ್‍ಮನ್ ಡ್ರೆಸ್ ಹಾಕಿಕೊಂಡು ಕೈಯಲ್ಲಿ ಲಾಠಿ, ವಿಶಲ್ ಹಿಡಿದು ವಾಚ್‍ಮನ್ ಆಗಿ ಕೆಲಸ ಮಾಡಲಿ’ ಎಂದು ಹೇಳಿದರು.

‘ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲವಾಗಿದೆ. ಸಿದ್ದರಾಮಯ್ಯ ಅವರನ್ನು ಹೊಗಳಿದರೆ ಮುಂದೆ ಏನಾದರೂ ಅವಕಾಶ ಸಿಕ್ಕೀತು ಎಂದು ಜಮೀರ್ ಅವರನ್ನು ಹೊಗಳುವ ಕೆಲಸ ಮಾಡುತ್ತಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ’ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು