ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ವೈಮಾನಿಕ ಪ್ರದರ್ಶನದಲ್ಲಿ ‘ರೇವಾ’ ವಿದ್ಯಾರ್ಥಿ

Last Updated 27 ಜನವರಿ 2022, 6:13 IST
ಅಕ್ಷರ ಗಾತ್ರ

ಬೆಂಗಳೂರು:ದೆಹಲಿಯಲ್ಲಿ ಬುಧವಾರ (ಜ.26) ನಡೆದಗಣರಾಜ್ಯೋತ್ಸವ ವಿಶೇಷ ವೈಮಾನಿಕ ಪ್ರದರ್ಶನದಲ್ಲಿ ರೇವಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಕೆ.ನಿತೀಶ್‌ ಕುಮಾರ್ ಭಾಗವಹಿಸಿದ್ದರು.

ಈ ಪ್ರದರ್ಶನದಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ‘75’ ಸಂಖ್ಯೆಯನ್ನು ಆಕಾಶದಲ್ಲಿ ಮೂಡಿಸಿದ್ದವು. ಇದೇ ತಂಡದಲ್ಲಿ ನಿತೀಶ್ ಕುಮಾರ್ ಸಹ ವಿಮಾನವೊಂದರ ಪೈಲಟ್‌ ಆಗಿದ್ದರು.ನಿತೀಶ್‌ 2016ರಲ್ಲಿ ರೇವಾ ಸಂಸ್ಥೆಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿದ್ದರು.

ರೇವಾ ಸಂಸ್ಥೆಯಹಳೆಯ ವಿದ್ಯಾರ್ಥಿಗಳಾದ ಸ್ಕ್ವಾಡ್ರನ್‌ ಲೀಡರ್ ನೇಹಾ ಯಾದವ್ ಹಾಗೂ ಕುಟ್ಟಪ್ಪ ಅವರೂ ಕಳೆದ ವರ್ಷದ ಗಣರಾಜ್ಯೋತ್ಸವ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ.ಶ್ಯಾಮರಾಜು,‘ನಮ್ಮ ಸಂಸ್ಥೆಗೆ ಇದು ಅತ್ಯಂತ ಹೆಮ್ಮೆಯ ಕ್ಷಣ. ಹಳೆಯ ವಿದ್ಯಾರ್ಥಿಗಳು ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.ತಮ್ಮ ಆಸಕ್ತಿಯ ವಲಯಗಳಲ್ಲಿ ಅವರ ಕನಸು ಹಾಗೂ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT