ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ: ಪರಿಷ್ಕೃತ ಅಂತಿಮ ವೇಳಾಪಟ್ಟಿ ಪ್ರಕಟ

ಏ. 22 ರಿಂದ ಮೇ 18ರವರೆಗೆ ವಾರ್ಷಿಕ ಪರೀಕ್ಷೆ
Last Updated 7 ಏಪ್ರಿಲ್ 2022, 14:33 IST
ಅಕ್ಷರ ಗಾತ್ರ

ಬೆಂಗಳೂರು: 2021– 22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಗುರುವಾರ ಪ್ರಕಟಿಸಿದೆ.

ಏಪ್ರಿಲ್‌ 22 ರಿಂದ ಮೇ 18 ರವರೆಗೆ ಪರೀಕ್ಷೆಗಳು ನಡೆಯಲಿವೆ. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಅಲ್ಪ ಬದಲಾವಣೆಯೊಂದಿಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾಪಟ್ಟಿಯನ್ನು ಅನುಸರಿಸಬಾರದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆಗಳು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿವೆ. ಮೇ 5ರಂದು ನಿಗದಿಯಾಗಿದ್ದ ಇಂಗ್ಲಿಷ್‌ ಪರೀಕ್ಷೆ 6 ರಂದು ನಡೆಯಲಿದೆ.

ಪರೀಕ್ಷಾ ವೇಳಾಪಟ್ಟಿ:ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್‌ 22ರಂದು ವ್ಯವಹಾರ ಅಧ್ಯಯನ ಮತ್ತು ತರ್ಕಶಾಸ್ತ್ರ, 23ರಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರ, 25ರಂದು ಅರ್ಥಶಾಸ್ತ್ರ, 26ರಂದು ರಸಾಯನವಿಜ್ಞಾನ ಮತ್ತು ಹಿಂದೂಸ್ತಾನಿ ಸಂಗೀತ ಹಾಗೂ ಮನಃಶಾಸ್ತ್ರ, 27ರಂದು ಸಂಸ್ಕೃತ, ಮರಾಠಿ, ತಮಿಳು, ತೆಲುಗು, ಮಲಯಾಳಿ, ಉರ್ದು ಮತ್ತು ಫ್ರೆಂಚ್‌ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ಏ.28 ರಂದು ಕನ್ನಡ ಮತ್ತು ಅರೇಬಿಕ್‌, ಮೇ 4ರಂದು ಭೂಗೋಳಶಾಸ್ತ್ರ, ಜೀವವಿಜ್ಞಾನ, ಮೇ 5ರಂದು ಮಾಹಿತಿ ತಂತ್ರಜ್ಞಾನ ಮತ್ತು ಆಟೋಮೊಬೈಲ್‌, ಮೇ 6ರಂದು ಇಂಗ್ಲಿಷ್‌, 10ರಂದು ಇತಿಹಾಸ, ಭೌತವಿಜ್ಞಾನ, 12ರಂದು ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ, 14ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ವಿಜ್ಞಾನ, ಗಣಕ ವಿಜ್ಞಾನ, 17ರಂದು ಭೂಗರ್ಭಶಾಸ್ತ್ರ ಮತ್ತು ಐಚ್ಛಿಕ ಕನ್ನಡ ಹಾಗೂ ಲೆಕ್ಕಶಾಸ್ತ್ರ ಮತ್ತು 18ರಂದು ಹಿಂದಿ ವಿಷಯದ ಪರೀಕ್ಷೆಗಳು ನಡೆಯಲಿವೆ.

ಏ. 24, ಏ. 29 ರಿಂದ ಮೇ 2 ಮತ್ತು ಮೇ 3ರಂದು ರಂಜಾನ್‌ ಮತ್ತು ಬಸವ ಜಯಂತಿ ದಿನ ಹಾಗೂ ಮೇ 7 ರಿಂದ ಮೇ 9, ಮೇ 11, 13, 15 ಮತ್ತು 16ರಂದು ಯಾವುದೇ ಪರೀಕ್ಷೆಗಳು ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT