ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೋಲ್‌ ಕಾಲ್‌ ಹೋರಾಟಗಾರರಿಂದ ಬಂದ್‌’

Last Updated 24 ನವೆಂಬರ್ 2020, 19:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕರ್ನಾಟಕ ಬಂದ್‌ ಮಾಡಲು ಡಿ.5 ರಂದು ಕರೆ ನೀಡಿರುವವರು ರೋಲ್‌ ಕಾಲ್‌ ಹೋರಾಟಗಾರರು. ಕನ್ನಡದ ಹೆಸರಿನಲ್ಲಿ ವಸೂಲಿ ದಂಧೆ ಮಾಡುತ್ತಾರೆ‘ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.

ಕೊರೊನಾ ಜನರ ಆರೋಗ್ಯದ ಮೇಲೆ ಮಾಡುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ‘ಆರೋಗ್ಯ ಬಂಧು’ ಆ್ಯಪ್‌ ಅನ್ನು ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಾಟಾಳ್‌ ನಾಗರಾಜ್‌ ವಿರುದ್ಧ ಹರಿಹಾಯ್ದ ಅವರು, ‘ಕನ್ನಡದ ಮೇಲೆ ಇವರಿಗೆ ಪ್ರೀತಿ ಇಲ್ಲ. ಪ್ರಚಾರವೇ ಅವರಿಗೆ ಮುಖ್ಯ. ಯಾವುದೇ ರೀತಿಯಲ್ಲಿ ಸುದ್ದಿಯಲ್ಲಿರಲು ಬಯಸುತ್ತಾರೆ’ ಎಂದು ಟೀಕಿಸಿದರು.

‘ಬಂದ್‌ಗೆ ಕರೆ ನೀಡಿರುವವರು ನಕಲಿ ಹೋರಾಟಗಾರರಾಗಿದ್ದಾರೆ. ಕನ್ನಡದ ಮೇಲೆ ಪ್ರೀತಿ ಇಲ್ಲ. ಹೊರಗಿನಿಂದ ಬಂದ ವ್ಯಾಪಾರಸ್ಥರು ಸೇರಿದಂತೆ ಹಲವರ ಬಳಿ ಕನ್ನಡದ ಹೆಸರಲ್ಲಿ ರೋಲ್‌ ಕಾಲ್‌ ಮಾಡುತ್ತಾರೆ’ ಎಂದು ಆರೋಪಿಸಿದರು.

‘ಮರಾಠ ಅಭಿವೃದ್ಧಿ ನಿಗಮ ರಚನೆಯನ್ನು ಸ್ವಾಗತಿಸುತ್ತೇನೆ. ಬೀದರ್‌ನಿಂದ ಬೆಂಗಳೂರುವರೆಗೆ ನೆಲೆಸಿರುವ ಮರಾಠಾ ಸಮಾಜದವರೂ ಕನ್ನಡಿಗರೇ’ ಎಂದು ಸಮರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT