ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಇಲಾಖೆ: ಹೆಚ್ಚುವರಿ ಆಯುಕ್ತರ ಹುದ್ದೆಗೂ ನಿಯೋಜನೆ

Last Updated 18 ಡಿಸೆಂಬರ್ 2022, 4:00 IST
ಅಕ್ಷರ ಗಾತ್ರ

ಬೆಂಗಳೂರು: ವರ್ಗಾವಣೆ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಣಾ ವ್ಯವಸ್ಥೆ ಹೆಸರಲ್ಲಿ ಸಿಬ್ಬಂದಿಯನ್ನಷ್ಟೇ ಅಲ್ಲ, ಹೆಚ್ಚುವರಿ ಆಯುಕ್ತರುಗಳನ್ನೂ ಸಾರಿಗೆ ಇಲಾಖೆ ನಿಯೋಜನೆ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಹೆಚ್ಚುವರಿ ಆಯುಕ್ತ ಜಿ.ಜ್ಞಾನೇಂದ್ರ ಕುಮಾರ್ ಅವರನ್ನು ಇ–ಆಡಳಿತ ಮತ್ತು ಪರಿಸರ ವಿಭಾಗಕ್ಕೆ. ಅಲ್ಲಿದ್ದ ಜಿ.ಪುರುಷೋತ್ತಮ ಅವರನ್ನು ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಪರಸ್ಪರ ನಿಯೋಜನೆ ಮಾಡಲಾಗಿದೆ.

ಸಂಬಳವಿಲ್ಲದೇ ಸಿಬ್ಬಂದಿ ಪರದಾಟ: ನಿಯೋಜನೆ ಮೇಲೆ ತೆರಳಿರುವ ಇಬ್ಬರು ಆಯುಕ್ತರು ತಮ್ಮ ವಿಭಾಗಗಳಲ್ಲಿ ವೇತನ ಬಟವಾಡೆಯ ಅಧಿಕಾರ ಚಲಾಯಿಸಲು ಸಾಧ್ಯವಾಗಿಲ್ಲ. ವೇತನ, ಕಚೇರಿ ಖರ್ಚು ವೆಚ್ಚಗಳ ಬಿಲ್‌ಗಳಿಗೆ ಸಹಿ ಮಾಡಲು ತಾಂತ್ರಿಕ ತೊಂದರೆ ಎದುರಾಗಿದೆ. ಪ್ರಭಾರ ಇದ್ದವರಿಗೆ ಡಿಜಿಟಲ್‌ ಸಹಿ ಮ್ಯಾಪಿಂಗ್‌ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಹುಜೂರ್‌ ಖಜಾನೆ ಕೋರಿಕೆಯನ್ನು ತಿರಿಸ್ಕರಿಸಿದೆ. ಇದರಿಂದ ಸಿಬ್ಬಂದಿಗೆ ಡಿಸೆಂಬರ್‌ ತಿಂಗಳ ವೇತನ ಪಡೆಯಲು ಸಾಧ್ಯವಾಗಿಲ್ಲ. ವಿದ್ಯುತ್‌ ಬಿಲ್, ವಾಹನಗಳ ಇಂಧನ ಪೂರೈಕೆ ಮತ್ತಿತರ ವೆಚ್ಚ ಭರಿಸಲು ಸಾಧ್ಯವಾಗಿಲ್ಲ. ಟೆಂಡರ್‌ ಪ್ರಕ್ರಿಯೆಗಳು, ಗುತ್ತಿಗೆ ಪಾವತಿ ಮೊತ್ತಗಳೂ ಬಾಕಿ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT