ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳಲ್ಲಿ ಪೂಜೆಗೆ ಇನ್ನು ‘ಸಲಾಂ’ ಪದ ಬಳಕೆ ಇಲ್ಲ

ದೀವಟಿಗೆ ಸಲಾಂ, ಸಲಾಂ ಆರತಿ, ಸಲಾಂ ಮಂಗಳಾರತಿ ಹೆಸರು ಬದಲಿಸಿ ಶೀಘ್ರ ಸುತ್ತೋಲೆ
Last Updated 10 ಡಿಸೆಂಬರ್ 2022, 20:53 IST
ಅಕ್ಷರ ಗಾತ್ರ

ಬೆಂಗಳೂರು: ‘ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ‘ದೀವಟಿಗೆ ಸಲಾಂ’, ‘ಸಲಾಂ ಆರತಿ’, ‘ಸಲಾಂ ಮಂಗಳಾರತಿ’ ಎಂಬ ಪೂಜಾ ಕಾರ್ಯಗಳ ಹೆಸರನ್ನು ‘ದೀವಟಿಗೆ ನಮಸ್ಕಾರ’, ‘ಆರತಿ ನಮಸ್ಕಾರ, ‘ಮಂಗಳಾರತಿ ನಮಸ್ಕಾರ’ ಎಂದು ಬದಲಿಸಲು ನಿರ್ಧರಿಸಲಾಗಿದೆ’ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

‘ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ಹೆಸರು ಬದಲಾಯಿಸಿ, ಸೇವೆಗಳನ್ನು ಮತ್ತು ಸೇವಾ ಕಾರ್ಯಗಳನ್ನು ಮುಂದುವರೆಸಲು ಸುತ್ತೋಲೆ ಹೊರಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ದೇವಾಲಯಕ್ಕೆ ಮತ್ತು ದೇವರಿಗೆ ದೀವಟಿಗೆ ಹಿಡಿದು ಆರತಿಯಂತೆ ನಡೆಸುವ ಪೂಜಾಕಾರ್ಯಕ್ಕೆ ಕೆಲವು ದೇವಾಲಯಗಳಲ್ಲಿ ‘ದೀವಟಿಗೆ ಸಲಾಂ’, ‘ಸಲಾಂ ಮಂಗಳಾರತಿ’, ‘ಸಲಾಂ ಆರತಿ ಎಂದು ಕರೆಯಲಾಗುತ್ತಿದೆ. ಇದನ್ನು ಬದಲಿಸಬೇಕು ಎಂದು ಭಕ್ತಾದಿಗಳಿಂದ ಒತ್ತಾಯ ಬಂದಿತ್ತು. ಈ ವಿಷಯವನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ
ಯಲ್ಲಿ ಸದಸ್ಯರು ಗಮನಕ್ಕೆ ತಂದರು. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ, ಪೂಜಾ
ಕಾರ್ಯಗಳ ಹೆಸರನ್ನು ನಮ್ಮ ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸಲು
ನಿರ್ಧರಿಸಲಾಯಿತು’ ಎಂದಿದ್ದಾರೆ.

‘ಕೇವಲ ಪದಗಳನ್ನು ಬದಲಿಸಿ, ನಮ್ಮ ಭಾಷೆಯ ಪದ ಅಳವಡಿಸಿ, ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಪೂಜೆಗಳನ್ನು ಮುಂದುವರೆಸಲಾಗು
ವುದು. ಪೂಜಾ ಕಾರ್ಯಗಳನ್ನು ರದ್ದುಪಡಿಸುವುದಿಲ್ಲ’ ಎಂದೂ ಅವರು
ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಸಂಸ್ಥೆಗಳಿಗೆ ಲೆಕ್ಕಪರಿಶೋಧನೆ ಹೊಣೆ ವಹಿಸಿಲ್ಲ

‘ಇಲಾಖೆಯ ವ್ಯಾಪ್ತಿಯಲ್ಲಿ ಬರುವ ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳು ಪ್ರತಿವರ್ಷ ಲೆಕ್ಕ
ಪರಿಶೋಧನೆ ಮಾಡಿಸುವುದು ಕಡ್ಡಾಯ. ಆದರೆ, ಹಲವು ದೇವಸ್ಥಾನಗಳಲ್ಲಿ ಹಲವು ವರ್ಷಗಳಿಂದ ಲೆಕ್ಕಪರಿಶೋಧನೆ ನಡೆದಿಲ್ಲ. ದೇವಸ್ಥಾನಗಳ ಆಡಳಿತದಲ್ಲಿ, ಭಕ್ತರು ನೀಡುವ ಕಾಣಿಕೆಯ ಬಳಕೆಯಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಆಯಾ ವರ್ಷ ಲೆಕ್ಕಪರಿಶೋಧನೆ
ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿತ್ತು. ಸರ್ಕಾರದ ಲೆಕ್ಕಪತ್ರ ಇಲಾಖೆ
ಯಿಂದಲೇ ಲೆಕ್ಕಪರಿಶೋಧನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಈ ಹೊಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

--

ಎಲ್ಲೆಲ್ಲಿ ‘ಸಲಾಂ ಆರತಿ’

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಗಳಲ್ಲಿ ‘ಸಲಾಂ ಆರತಿ’ ಪೂಜೆ ನಡೆಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT