ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ್ವ್ ಫಾರ್ ಟುಮಾರೋ ಸ್ಪರ್ಧೆಗೆ ಅರ್ಜಿ ಆಹ್ವಾನ: ಗೆದ್ದವರಿಗೆ ₹ 1 ಕೋಟಿ ನೆರವು

Last Updated 16 ಜುಲೈ 2022, 4:00 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ, ಪರಿಸರ, ಕೃಷಿ ಹಾಗೂ ಆರೋಗ್ಯ ಕ್ಷೇತ್ರವನ್ನು ಸುಧಾರಿಸುವ ನಿಟ್ಟಿನಲ್ಲಿ ನಿಮ್ಮ ಬಳಿ ಉತ್ತಮ ಐಡಿಯಾಗಳಿದ್ದರೆ ಕಳುಹಿಸುವ ಮೂಲಕ ₹ 1 ಕೋಟಿವರೆಗೂ ನೆರವು ಪಡೆಯಬಹುದು.!

ಸ್ಯಾಮ್‌ಸಂಗ್‌ ತನ್ನ ಸಿಎಸ್‌ಆರ್‌ ಚಟುವಟಿಕೆ ಅಡಿಯಲ್ಲಿ 'ಸಾಲ್ವ್ ಫಾರ್ ಟುಮಾರೋ'(ನಾಳಿನ ಪರಿಹಾರ) ಎಂಬ ಸ್ಪರ್ಧೆಯನ್ನು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದೆ.ದೇಶದಪ್ರಮುಖ ಸಮಸ್ಯೆಗಳಾದ ಇಂಧನ, ಆರೋಗ್ಯ, ಕಸದ ಸಮಸ್ಯೆ, ಶಿಕ್ಷಣ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆನಿಮ್ಮ ಬಳಿ ಅತ್ಯುತ್ತಮ ಐಡಿಯಾಗಳು ಇದ್ದರೆ ಅವನ್ನು ಈ ಸ್ಪರ್ಧೆಗೆ ಕಳುಹಿಸಿಕೊಡಬಹುದು.

ಬೆಂಗಳೂರಿನ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ಸ್ಯಾಮ್‌ಸಂಗ್‌ ಇಂಡಿಯಾ ಆಯೋಜಿಸಿದ್ದ ಶೈಕ್ಷಣಿಕ ಮತ್ತು ಅನ್ವೇಷಣೆ ರೋಡ್‌ಶೋನಲ್ಲಿ ಈ ಘೋಷಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರೋಡ್‌ಶೋದಲ್ಲಿ ಭಾಗವಹಿಸಿದ್ದ ಸ್ಟಾಂಡಪ್‌ ಕಾಮಿಡಿಯನ್‌ ಡಾ. ಚತುರ್ವೇದಿ, ಭಾರತ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳನ್ನು ಪರಿಹರಿಸಲು ಯುವಜನರು ತಮ್ಮಲ್ಲಿರುವ ಐಡಿಯಾಗಳನ್ನು ಹಂಚಿಕೊಳ್ಳಬೇಕು ಎಂದಿದ್ದಾರೆ.

ದೇಶದ ವಿವಿಧ ಭಾಗದಿಂದ ಇದುವರೆಗೆ 8 ಸಾವಿರಕ್ಕೂ ಹೆಚ್ಚು ತಂಡಗಳು ಸ್ಫರ್ಧೆಗೆ ನೋಂದಣಿ ಮಾಡಿಕೊಂಡಿವೆ. ಈ ಪೈಕಿ ಮೂರು ರಾಷ್ಟ್ರೀಯ ವಿಜೇತರು ₹ 1 ಕೋಟಿ ವರೆಗೆ ನೆರವು ಪಡೆಯಲಿದ್ದಾರೆ ಮತ್ತುತಮ್ಮ ಐಡಿಯಾಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಐಐಟಿ ದೆಹಲಿಯ ಪರಿಣಿತರಿಂದ ಆರು ತಿಂಗಳುಮಾರ್ಗದರ್ಶನ ಪಡೆಯಲಿದ್ದಾರೆ.

'ಸಾಲ್ವ್ ಫಾರ್ ಟುಮಾರೋ' ಸ್ಪರ್ಧೆಯವಿವರ
* 16-22 ವರ್ಷದವರುವೈಯಕ್ತಿಕವಾಗಿ ಅಥವಾ 3 ಮಂದಿಯ ತಂಡ ಸ್ಪರ್ಧೆಗೆಭಾಗವಹಿಸಬಹುದು
* ಶಿಕ್ಷಣ, ಪರಿಸರ, ಆರೋಗ್ಯ ಸೇವೆ ಮತ್ತು ಕೃಷಿಅರ್ಜಿಯ ಥೀಮ್‌ಗಳು
* ಆನ್‌ಲೈನ್‌ತರಬೇತಿ, ಸ್ಯಾಮ್‌ಸಂಗ್‌ ಮತ್ತು ಐಐಟಿ ದೆಹಲಿಯಂದ ಮಾರ್ಗದರ್ಶನ, ಐಐಟಿ ದೆಹಲಿಯಲ್ಲಿ ಬೂಟ್‌ಕ್ಯಾಂಪ್‌ ಇರಲಿದೆ
* 3 ವಿಜೇತ ತಂಡಗಳಿಗೆ ₹ 1 ಕೋಟಿವರೆಗೆ ನಗದು, 6 ತಿಂಗಳವರೆಗೆ ಮಾರ್ಗದರ್ಶನ ಸಿಗಲಿದೆ
* www.samsung.com/in/solvefortomorrow ವೆಬ್‌ಸೈಟ್‌ ಅರ್ಜಿ ಸಲ್ಲಿಸಬಹುದು
* ಅರ್ಜಿ ಸಲ್ಲಿಸಲುಕೊನೆಯ ದಿನಾಂಕ; ಜುಲೈ 31, 2022ರ ಸಂಜೆ 5ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT