ಮಂಗಳವಾರ, ಆಗಸ್ಟ್ 16, 2022
21 °C

ಗುರುಮಹಾಂತ ಸ್ವಾಮೀಜಿಗೆ ‘ಸಂಯಮ ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಜನರಲ್ಲಿ ದುಶ್ಚಟಗಳನ್ನು ಬಿಡಿಸಲು ಮೌನಕ್ರಾಂತಿ ಕೈಗೊಂಡಿರುವ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಅವರನ್ನು ಪ್ರಸಕ್ತ ಸಾಲಿನ ‘ಸಂಯಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ’ ಎಂದು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹನುಮಂತ ಕೊಟಬಾಗಿ ತಿಳಿಸಿದರು.

ಇಲ್ಲಿನ ಕಲ್ಮಠದಲ್ಲಿ ಶುಕ್ರವಾರ ಮಾಹಿತಿ ನೀಡಿದ ಅವರು, ‘ಪ್ರಶಸ್ತಿ ₹ 1 ಲಕ್ಷ ನಗದು ಹಾಗೂ ಬೆಳ್ಳಿ ಪದಕ ಒಳಗೊಂಡಿದೆ. ಜನವರಿ ಮೊದಲ ವಾರದಲ್ಲಿ ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಿತ್ತೂರು ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಹೇಳಿದರು.

‘ಶ್ರೀಮಠದ ಡಾ.ಮಹಾಂತ ಸ್ವಾಮೀಜಿ ಆರಂಭಿಸಿದ್ದ ಮಹಾಂತ ಜೋಳಿಗೆ ಅಂದೋಲನದಿಂದ ಲಕ್ಷಾಂತರ ಜನರು ದುಶ್ಚಟಗಳನ್ನು ತೊರೆದಿದ್ದಾರೆ. ಮದ್ಯದ ಬಾಟಲಿ, ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು ಪೊಟ್ಟಣಗಳನ್ನು ಭಿಕ್ಷೆ ಬೇಡಿ ಅವರು ಜೋಳಿಗೆಗೆ ಹಾಕಿಸಿಕೊಳ್ಳುತ್ತಿದ್ದರು. ಇದೇ ಸಂಪ್ರದಾಯ ಮುಂದುವರಿಸಿರುವ ಗುರುಮಹಾಂತ ಸ್ವಾಮೀಜಿ, ಸಾವಿರಾರು ಜನರನ್ನು ದುಶ್ಚಟ ಮುಕ್ತರನ್ನಾಗಿಸಿದ್ದಾರೆ. ಸ್ವಾಮೀಜಿಯವರ ಈ ಸೇವೆ ಅನನ್ಯ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು