ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ಬಿತ್ತಿ ಮತಾಂತರ ಸಲ್ಲ: ಸಾಣೇಹಳ್ಳಿ ಶ್ರೀ

Last Updated 11 ಮಾರ್ಚ್ 2021, 20:12 IST
ಅಕ್ಷರ ಗಾತ್ರ

ಹೊಸದುರ್ಗ: ‘ಸಾಮಾಜಿಕವಾಗಿ ಉಪೇಕ್ಷೆಗೆ ಒಳಗಾದವರು ಮತಾಂತರದ ಮೋಹಕ್ಕೆ ಬಲಿಯಾಗುತ್ತಾರೆ. ಜನರಲ್ಲಿ ಮೌಢ್ಯವನ್ನು ಬಿತ್ತಿ ಮತಾಂತರಗೊಳಿಸುವುದು ಸರಿಯಲ್ಲ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಶಿವರಾತ್ರಿ ನಿಮಿತ್ತ ಗುರುವಾರ ಅವರು ಮಾತನಾಡಿದರು. ‘ಲಿಂಗಾಯತ ಧರ್ಮದಲ್ಲಿ ಜಾತಿ, ಮತ, ಪಕ್ಷ, ಹೆಣ್ಣು, ಗಂಡುಗಳೆಂಬ ಅಂತರವಿಲ್ಲ. ಇಲ್ಲಿ ಮೌಢ್ಯಕ್ಕೆ ಅವಕಾಶವಿಲ್ಲ. ಯಾರು ಬೇಕಾದರೂ ಈ ಧರ್ಮ ಸೇರಬಹುದು. ಅಜ್ಞಾನ, ಬಡತನ, ರೋಗ–ರುಜಿನ, ಮೌಢ್ಯ ಆಚರಣೆ ಮತಾಂತರಕ್ಕೆ ಕಾರಣ. ಸಾಮಾನ್ಯವಾಗಿ ಯೇಸುವನ್ನು ನೆನಪಿಸಿಕೊಂಡಾಕ್ಷಣ ಕಾಯಿಲೆ ವಾಸಿಯಾಗುವುದಾದರೆ ಕ್ರಿಶ್ಚಿಯನ್ ಮಿಷನರಿಗಳು ದೊಡ್ಡ ದೊಡ್ಡ ಆಸ್ಪತ್ರೆ, ಶಾಲೆಗಳನ್ನು ತೆರೆಯುವ ಅಗತ್ಯವಿರಲಿಲ್ಲ. ಮತಾಂತರವನ್ನು ತಡೆಗಟ್ಟಲು ಜನರಲ್ಲಿ ವಿಚಾರ ಕ್ರಾಂತಿಯನ್ನು ಬಿತ್ತಿ ಅರಿವು ಮೂಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT