ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ಶಿಕ್ಷಣ ನೀತಿಯಿಂದ ದೇಶದ ಬಹುತ್ವ ಧ್ವಂಸ’

Last Updated 27 ಜನವರಿ 2022, 6:13 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗಿನ ಶಿಕ್ಷಣ ನೀತಿಗಳು ದೇಶದ ಬಹುತ್ವವನ್ನು ಧ್ವಂಸಗೊಳಿಸುವಂತಿವೆ. ದೇಶದ ಜನ ಹಾಗೂ ಶಿಕ್ಷಣ ಪ್ರೇಮಿಗಳು ಬಹುತ್ವ ಉಳಿಸಲು ಮುಂದೆ ಬರಬೇಕು’ ಎಂದುಜೆಎನ್‌ಯು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಕುಂಕುಮ್‍ ರಾಯ್ ಹೇಳಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ‘ಭಾರತೀಯ ಜ್ಞಾನ ಪದ್ದತಿ ಮತ್ತು ಇತಿಹಾಸದ ವಿರೂಪ’ ಕುರಿತು ಬುಧವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಇಲ್ಲಿ ರಾಜ್ಯಕ್ಕೆ ಶಿಕ್ಷಣ ನೀತಿ ರೂಪಿಸುವ ಅಧಿಕಾರವಿದೆ. ಆದರೆ, ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ರಾಜ್ಯಗಳ ಮೇಲೆ ಹೇರುತ್ತಿದೆ’ ಎಂದು ದೂರಿದರು.

‘ಪ್ರಾಚೀನ ಕಾಲದಲ್ಲಿದ್ದ ಜ್ಞಾನ ಬಡವರು ಮತ್ತು ಮಹಿಳೆಯರಿಗೆ ನಿಲುಕುತ್ತಿರಲಿಲ್ಲ. ಕೇಂದ್ರ ಸರ್ಕಾರಈ ಸತ್ಯವನ್ನು ಮುಚ್ಚಿಟ್ಟು, ತನ್ನ ಚಿಂತನೆಗಳನ್ನು ಶಿಕ್ಷಣದಲ್ಲಿ ತೂರುತ್ತಿದೆ. ಇದನ್ನು ನಾವೆಲ್ಲ ವಿರೋಧಿಸಬೇಕಿದೆ’ ಎಂದರು.

ವಿಜ್ಞಾನಿ ಸೌಮಿತ್ರೊ ಬ್ಯಾನರ್ಜಿ, ‘ಸಂಸ್ಕೃತವನ್ನು ದೇಶದ ಮೇಲೆ ಹೇರುವುದೇಭಾರತೀಯ ಜ್ಞಾನ ಪದ್ಧತಿ ಮತ್ತು ಈಗಿನ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ’ ಎಂದರು.

‘ಪ್ರಾಚೀನ ಭಾರತದಲ್ಲಿ ಭಾಸ್ಕರಾಚಾರ್ಯರಂತಹ ಸಾಧಕರುಗಳು ಜ್ಞಾನ ಜಗತ್ತಿಗೆ ಹೆಚ್ಚು ಕೊಡುಗೆ ನೀಡಿದ್ದಾರೆ. ಇಂತಹ ಸಂಗತಿಗಳನ್ನು ನಾವು ಹೆಮ್ಮೆಯಿಂದ ಹೇಳೋಣ. ಆದರೆ, ನಮ್ಮ ಸಾಧನೆಗಳಲ್ಲದ ಸಂಶೋಧನೆಗಳನ್ನು ನಮ್ಮದೆಂದು ವೈಭವೀಕರಿಸುವುದು ಜ್ಞಾನ ಜಗತ್ತಿಗೆ ಮಾಡುವ ದೊಡ್ಡ ಮೋಸ. ಈ ಧೋರಣೆ ರಾಷ್ಟ್ರದ ಮೇಲೆ ಅಂಧಾಭಿಮಾನ ಸೃಷ್ಟಿಸುತ್ತದೆ’ ಎಂದು ಹೇಳಿದರು.

ಹೈದರಾಬಾದ್‌ನ ಓಸ್ಮಾನಿಯಾ ವಿಶ್ವವಿದ್ಯಾಯಲಯದ ಪ್ರೊ.ಪಿ.ಎಲ್.ವಿಶ್ವೇಶ್ವರ ರಾವ್‌, ‘ಕೇಂದ್ರ ಸರ್ಕಾರ ತನ್ನ ಪಕ್ಷದ ವಿಚಾರವನ್ನು ಶಿಕ್ಷಣದಲ್ಲಿ ತರಲು ಹೊರಟಿದೆ. ಶಿಕ್ಷಣವನ್ನು ಶಿಕ್ಞಣವಾಗಿಯೇ ಉಳಿಸಲು ದನಿ ಎತ್ತುವ ಸನ್ನಿವೇಶದಲ್ಲಿ ನಾವಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT