ಸಚಿವಾಲಯ ಬಂದ್ ನೌಕರರಿಂದ ಎಚ್ಚರಿಕೆ
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಚಿವಾಲಯ ನೌಕರರು ಇದೇ 24 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
‘ಸರ್ಕಾರದ ಮುಖ್ಯಕಾರ್ಯದರ್ಶಿ ನಮ್ಮ ಬೇಡಿಕೆಗಳ ಬಗ್ಗೆ ಕಿವಿಗೊಡುತ್ತಿಲ್ಲ. ಮಾತುಕತೆಗೂ ಆಹ್ವಾನಿಸುತ್ತಿಲ್ಲ. ಅವರು ನಮ್ಮನ್ನು ಕರೆಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಚಿವಾಲಯ ಬಂದ್ ಮಾಡಲಾಗುವುದು’ ಎಂದೂ ನೌಕರರು ಎಚ್ಚರಿಕೆ ನೀಡಿದ್ದಾರೆ.
ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಖಾಲಿ ಹುದ್ದೆಗಳಿಗೆ ನಿವೃತ್ತರನ್ನು ಭರ್ತಿ ಮಾಡಬಾರದು, ನೇಮಕಾತಿ ನಿಯಮಾವಳಿಯನ್ನು ಪುನರ್ ಸ್ಥಾಪನೆ, ಕಿರಿಯ ಸಹಾಯಕರನ್ನು ಉಳಿಸಿಕೊಳ್ಳಬೇಕು, ಗ್ರೂಪ್ ಡಿ ಮತ್ತು ಚಾಲಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.