ಶಿವರಾಮ ಕಾರಂತ ಪುರಸ್ಕಾರಕ್ಕೆ ವಿಕ್ರಮ ವಿಸಾಜಿ ಆಯ್ಕೆ

ಕಲಬುರಗಿ: ಮೂಡುಬಿದಿರೆಯ ‘ಶಿವರಾಮ ಕಾರಂತ ಪ್ರತಿಷ್ಠಾನ’ ನೀಡುವ ಶಿವರಾಮ ಕಾರಂತ ಪುರಸ್ಕಾರಕ್ಕೆ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ, ಸಾಹಿತಿ ವಿಕ್ರಮ ವಿಸಾಜಿ ಅವರ ‘ಪಠ್ಯದ ಭವಾವಳಿ’ ವಿಮರ್ಶೆಯ ಕೃತಿಯನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ₹ 10 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಒಳಗೊಂಡಿದೆ. ಮೇ 1ರಂದು ಬೆಳ್ತಂಗಡಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಡಾ. ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.