ಕೃಷಿ ಸಚಿವರ ಹೇಳಿಕೆಗೆ ಖಂಡನೆ; ರಾಜೀನಾಮೆಗೆ ಆಗ್ರಹ

ಮೈಸೂರು: ‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಹೇಳಿಕೆ ಖಂಡನೀಯ. ರೈತರು ಸ್ವಾಭಿಮಾನಿಗಳು. ಅವರನ್ನು ಸಂಕಷ್ಟಕ್ಕೆ ನೂಕಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ’ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಟ್ವೀಟ್ ಮೂಲಕ ತರಾಟೆ: ‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳಲ್ಲ ಬಿ.ಸಿ.ಪಾಟೀಲ ಅವರೇ, ಹಣ-ಅಧಿಕಾರಕ್ಕಾಗಿ ಆತ್ಮವನ್ನು ಮಾರಿಕೊಂಡವರು ಹೇಡಿಗಳು. ಅನ್ನ ಕೊಡುವ ರೈತರನ್ನು ನಿಂದಿಸಿ ಉಂಡಮನೆಗೆ ದ್ರೋಹ ಬಗೆಯುವ ತಮಗೆ ಒಂದು ಕ್ಷಣವೂ ಕೃಷಿ ಖಾತೆಯಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ’ ಎಂದು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಮಳೆ ಮತ್ತು ಪ್ರವಾಹದಿಂದ ಸರ್ವಸ್ವವನ್ನು ಕಳೆದುಕೊಂಡು ಬೀದಿಪಾಲಾಗಿರುವ ರೈತರಿಗೆ, ಪರಿಹಾರಕೊಟ್ಟು ನೆರವಾಗುವ ಯೋಗ್ಯತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಇಲ್ಲ. ಗಾಯದ ಮೇಲೆ ಬರ ಎಳೆದಂತೆ ಅದೇ ರೈತರನ್ನು ಹೇಡಿಗಳೆಂದು ಜರಿಯುತ್ತೀರಾ? ಹೊಟ್ಟೆಗೆ ಏನು ತಿನ್ನುತ್ತೀರಾ?’ ಎಂದು ಕಿಡಿಕಾರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.