ಬುಧವಾರ, ಆಗಸ್ಟ್ 17, 2022
27 °C

‘ಸಿದ್ದರಾಮಯ್ಯ ಜೊತೆ ಹಣಕಾಸು ವ್ಯವಹಾರ ಮಾಡಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಲೋಕಸಭೆ ಚುನಾವಣೆ ವೇಳೆ ವೈಯಕ್ತಿವಾಗಿ ನನಗೆ ಸಿದ್ದರಾಮಯ್ಯ ಹಣ ನೀಡಿಲ್ಲ. ಅವರೊಂದಿಗೆ ಯಾವುದೇ ರೀತಿಯ ಹಣಕಾಸು ವ್ಯವಹಾರ ಮಾಡಿಲ್ಲ. ಹಾಗೆಯೇ, ನಾನಾಗಲೀ ಸಿದ್ದರಾಮಯ್ಯ ಅವರಾಗಲೀ ಹಣ ಹಂಚಿಲ್ಲ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಮಂಗಳವಾರ ಇಲ್ಲಿ ಹೇಳಿದರು.

‘ಕ್ಷೇತ್ರದಲ್ಲಿ ಜೆಡಿಎಸ್‌ ಅಧ್ಯಕ್ಷ ರಾಜು ಹಾಗೂ ಡಾ.ಯತೀಂದ್ರ ಅವರು ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಖರ್ಚಿಗೆ ಹಣ ವಿತರಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅಥವಾ ಡಾ.ಯತೀಂದ್ರ ನನಗೆ ನೇರವಾಗಿ ಹಣ ನೀಡಿಲ್ಲ’ ಎಂದರು.

‘25 ವರ್ಷಗಳಿಂದ ನಾನು ಹಾಗೂ ಸಿದ್ದರಾಮಯ್ಯ ಜೊತೆಯಲ್ಲಿದ್ದೇವೆ. ಪರಸ್ಪರ ಚೆನ್ನಾಗಿ ತಿಳಿದುಕೊಂಡಿದ್ದೇವೆ. ಈ ಅವಧಿಯಲ್ಲಿ ನಾನು ಯಾವುದಾದರೂ ವರ್ಗಾವಣೆ, ಕಾಮಗಾರಿ, ಚುನಾವಣೆ ವಿಚಾರದಲ್ಲಿ ದುಡ್ಡು ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರೆ ರಾಜಕೀಯದಲ್ಲೇ ಇರುವುದಿಲ್ಲ’ ಎಂದು ಸವಾಲು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು