ಸೋಮವಾರ, ಆಗಸ್ಟ್ 15, 2022
28 °C

ಅಭಿಮಾನಿ, ಹಿತೈಷಿಗಳಿಂದ ‘ಸಿದ್ದರಾಮೋತ್ಸವ’: ಎಚ್.ಸಿ. ಮಹದೇವಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಿದ್ದರಾಮಯ್ಯ ಒಬ್ಬ ಜನ ನಾಯಕ. ರಾಜ್ಯದಲ್ಲಿ ಅವರದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಅವರ ಅಭಿಮಾನಿಗಳು, ಹಿತೈಷಿಗಳು ಎಲ್ಲರೂ ಸೇರಿ ಸಿದ್ದರಾಮೋತ್ಸವ ಆಚರಿಸಲು ಮುಂದಾಗಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್.ಸಿ. ಮಹದೇವಪ್ಪ ಹೇಳಿದರು.

ಸಿದ್ದರಾಮೋತ್ಸವ ಸಮಾವೇಶ ಬಗ್ಗೆ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಎಂದೂ ಹುಟ್ಟು ಹಬ್ಬ ಆಚರಿಸಿಕೊಂಡವರಲ್ಲ. ಅದು ಅವರಿಗೆ ಇಷ್ಟವೂ ಇಲ್ಲ. ಆದರೂ ಎಲ್ಲರನ್ನೂ ಒಳಗೊಂಡಂತೆ ಸಮಾವೇಶ ನಡೆಸಲಾಗುವುದು. ಅದಕ್ಕೂ ಮೊದಲು ಸಿದ್ದರಾಮಯ್ಯ ಬಳಿ ಅದಕ್ಕೆ ಒಪ್ಪಿಗೆ ಪಡೆಯುತ್ತೇವೆ. ಆ ಬಳಿಕ ಎಲ್ಲವೂ ನಡೆಯಲಿದೆ’ ಎಂದರು.

‘ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದಂಥ ಯೋಜನೆಗಳನ್ನು ಜನರು ಈಗಲೂ ಮೆಲುಕು ಹಾಕುತ್ತಾರೆ. ಹೇಳಿಕೇಳಿ ಇದು ಚುನಾವಣಾ ವರ್ಷ. ಹೀಗಾಗಿ ಅವರ ಅವಧಿಯ ಜನಪರ ಯೋಜನೆಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ’ ಎಂದರು.

ಶಿಕ್ಷೆ ನೀಡಲೇಬೇಕು: ಉದಯಪುರ ಘಟನೆಯನ್ನು ಖಂಡಿಸಿದ ಮಹದೇವಪ್ಪ, ‘ಇಂಥ ಘಟನೆ ಆಘಾತಕಾರಿ. ಧರ್ಮಾಂಧರನ್ನು ಕ್ಷಮಿಸುವ‌ ಪ್ರಶ್ನೆಯೇ ಇಲ್ಲ. ಯಾವುದೇ ಧರ್ಮ ಆಗಲಿ ಧರ್ಮಾಂಧರು ಅಪಾಯಕಾರಿ. ಸಂವಿಧಾನ ಇದನ್ನು ಒಪ್ಪುವುದಿಲ್ಲ. ನಾವು ಬಯಸುವುದು ಸಹಬಾಳ್ವೆ, ಶಾಂತಿ, ನೆಮ್ಮದಿ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲೇಬೇಕು‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು