ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯವಿದ್ದರೆ ಎಸ್‌ಡಿಪಿಐ–ಪಿಎಫ್‌ಐ ನಿಷೇಧಿಸಿ: ಸಿಎಂಗೆ ಸಿದ್ದರಾಮಯ್ಯ ಸವಾಲು

Last Updated 22 ಫೆಬ್ರುವರಿ 2021, 14:30 IST
ಅಕ್ಷರ ಗಾತ್ರ

ಮಂಗಳೂರು: ‘ಡಿ.ಜೆ. ಹಳ್ಳಿ– ಕೆ.ಜೆ. ಹಳ್ಳಿ ಪ್ರಕರಣಗಳಲ್ಲಿ ಎಸ್‌ಡಿಪಿಐ – ಪಿಎಫ್‌ಐ ಪಾತ್ರದ ಬಗ್ಗೆ ಸಾಕ್ಷ್ಯ ಇದ್ದರೆ, ತಕ್ಷಣವೇ ಅವುಗಳನ್ನು ನಿಷೇಧ ಮಾಡಿ’ ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ನಗರದಲ್ಲಿ ಸೋಮವಾರ ‘ಭಾವೈಕ್ಯತಾ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಯಾರೇ ಮಾಡಿದರೂ, ಕೋಮುವಾದವೇ, ಖಂಡಿಸುತ್ತೇನೆ’ ಎಂದರು.

‘ರಾಜ್ಯ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರ ಅನುದಾನವನ್ನು ₹3 ಸಾವಿರ ಕೋಟಿಯಿಂದ ₹800 ಕೋಟಿಗೆ ಇಳಿಕೆ ಮಾಡಿದೆ. ನಾನು ಅಧಿಕಾರಕ್ಕೆ ಬಂದರೆ ₹10 ಸಾವಿರ ಕೋಟಿಗೆ ಏರಿಸುತ್ತಿದ್ದೆ’ ಎಂದರು.

‘ದೇಶದಲ್ಲಿಬಿಜೆಪಿಯವರೇ ಶೇ 90ರಷ್ಟು ಬೀಫ್‌ ವ್ಯಾಪಾರ ಮಾಡುತ್ತಿದ್ದು, ಅದರ ಆಮದು–ರಫ್ತು ನಿಷೇಧ ಮಾಡುತ್ತಿಲ್ಲ. ಆದರೆ, ಗೋ ಹತ್ಯೆ ನಿಷೇಧ ಕಾಯ್ದೆ ಮೂಲಕ ರೈತರು ಹಾಗೂ ಅಲ್ಪಸಂಖ್ಯಾತರನ್ನು ಹೊಡೆಯುವ ಹುನ್ನಾರ ನಡೆಸಿದ್ದಾರೆ’ ಎಂದರು.

‘ವಿವಿಧ ಬಲಾಢ್ಯ ಸಮುದಾಯಗಳ ಮೀಸಲಾತಿ ಹೋರಾಟಗಳ ಮೂಲಕ, ಮೀಸಲಾತಿಯನ್ನೇ ರದ್ದು ಪಡಿಸುವ ಷಡ್ಯಂತ್ರವನ್ನು ಆರ್‌ಎಸ್‌ಎಸ್‌ ಮಾಡಿಸುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.

‘ಅಲ್ಪಸಂಖ್ಯಾತರ ಮೀಸಲಾತಿಯನ್ನು ತೆಗೆಯು ಹುನ್ನಾರ ನಡೆಯುತ್ತಿದ್ದು, ಉಗ್ರ ಹೋರಾಟ ನಡೆಸಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

ರಾಜ್ಯಸಭಾ ಸದಸ್ಯ ಸೈಯ್ಯದ್ ನಾಸೀರ್ ಹುಸೇನ್, ‘ಕರಾವಳಿಯು ಕೋವಮುದಾದದ ಪ್ರಯೋಗಶಾಲೆಯಾಗಿದ್ದು, ಕೇವಲ ಬಹುಸಂಖ್ಯಾತರು ಮಾತ್ರವಲ್ಲ, ಅಲ್ಪಸಂಖ್ಯಾತರ ಕೋಮುವಾದದ ಬಗ್ಗೆಯೂ ಎಚ್ಚರ ಇರಲಿ. ಬಿಹಾರದಲ್ಲಿ ಬಿಜೆಪಿ ಮೈತ್ರಿಯನ್ನು ಎಐಎಂಐಎಂ ಅಧಿಕಾರಕ್ಕೆ ತಂದಿದೆ. ಇಲ್ಲಿ ಎಸ್‌ಡಿಪಿಐ–ಪಿಎಫ್‌ಐ ಬಗ್ಗೆ ಎಚ್ಚರ ಇರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT