ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ರೈಲ್ವೆ:₹4,447 ಕೋಟಿ ಆದಾಯ

Last Updated 2 ಡಿಸೆಂಬರ್ 2022, 17:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ₹ 4,447.62 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹ 3,400.83 ಕೋಟಿ ಆದಾಯ ಬಂದಿತ್ತು. ಆದಾಯದಲ್ಲಿ ಶೇ 30.78ರಷ್ಟು ಏರಿಕೆಯಾಗಿದೆ ಎಂದು ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕರಿಂದ ಬರುವ ಆದಾಯದಲ್ಲಿ ಕಳೆದ ವರ್ಷಕ್ಕಿಂತ ಶೇ 95.57ರಷ್ಟು ಹೆಚ್ಚಳವಾಗಿದೆ. ₹ 1813.58 ಕೋಟಿ ಆದಾಯ ಬಂದಿದೆ. ಹಿಂದಿನ ವರ್ಷ ₹ 927.31 ಕೋಟಿ ಆದಾಯವಿತ್ತು. ಟಿಕೆಟ್‌ ಇಲ್ಲದವರಿಗೆ ವಿಧಿಸುವ ದಂಡದ ಮೂಲಕ ₹ 37.74 ಕೋಟಿ ಆದಾಯ ಬಂದಿದೆ.

ಪಾರ್ಸಲ್‌ ಹಾಗೂ ಲಗೇಜ್‌ದಿಂದ ₹ 93.29 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷದ ₹ 80.20 ಕೋಟಿ ಆದಾಯಕ್ಕೆ ಹೋಲಿಸಿದರೆ ಶೇ 16.32ರಷ್ಟು ಏರಿಕೆಯಾಗಿದೆ. ಅನುಪ
ಯುಕ್ತ ವಸ್ತುಗಳ (ಸ್ಕ್ರ್ಯಾಪ್‌ ಸೇಲ್‌) ಮಾರಾಟದಿಂದ ₹ 113.43 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷದ ₹ 96.67 ಕೋಟಿಗೆ ಹೋಲಿಸಿದರೆ ಶೇ 17.34ರಷ್ಟು ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT