ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ವಿದ್ಯಾಗಮ ತರಗತಿಗೆ ವಿನೂತನ ಕಲಿಕಾ ಕಾರ್ಡ್‌..!

ಮೊಬೈಲ್‌ ಇಲ್ಲದ, ವಾಟ್ಸ್‌ಆ್ಯಪ್‌ ಬಳಸದ ಮಕ್ಕಳಿಗೆ ಅನುಕೂಲ
Last Updated 7 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮದ ಅಯ್ಯಪ್ಪ ದೇಗುಲದ ಆವರಣದಲ್ಲಿ ಶಿಕ್ಷಕ ಸಿ.ಎಸ್.ಸತೀಶ್ ’ವಿದ್ಯಾಗಮ‘ ತರಗತಿ ನಡೆಸುತ್ತಿದ್ದಾರೆ.

ವಿದ್ಯಾಗಮ ತರಗತಿಗಾಗಿ ಸತೀಶ್‌ ಅವರು ವಿನೂತನ ಕಲಿಕಾ ಕಾರ್ಡ್‌ ಸಿದ್ಧಪಡಿಸಿದ್ದಾರೆ. ವಾಯಿಸ್‌ ರೆಕಾರ್ಡಿಂಗ್‌ ಸೇರಿದಂತೆ ತಂತ್ರಜ್ಞಾನದ ನೆರವು ಪಡೆದುಕೊಂಡಿದ್ದಾರೆ. ಇದರಿಂದ ಕಲಿಸುವಿಕೆ ಮತ್ತು ಕಲಿಕೆ ಪರಿಣಾಮಕಾರಿಯಾಗಿದೆ. ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ತಾವು ಸಿದ್ಧಪಡಿಸಿದ ಕಲಿಕಾ ಕಾರ್ಡ್‌ಗಳನ್ನು ಸತೀಶ್‌ ಅವರು ಕೊಟ್ಟು ಬಂದಿದ್ದಾರೆ.

ಮೊಬೈಲ್, ಇಂಟರ್‌ನೆಟ್‌ ಸೌಲಭ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಹಾಗೂ ಇಂಟರ್‌ನೆಟ್‌ ಇಲ್ಲದ ಮಕ್ಕಳಿಗೆ ಮೊಬೈಲ್‌ ಕಾನ್ಫರೆನ್ಸ್ ಕಾಲ್ ಮೂಲಕ ಬೋಧನೆ ನಡೆಯುತ್ತಿದೆ. ಮೊಬೈಲ್ ಇಲ್ಲದ ಮಕ್ಕಳಿಗೆ ಕಲಿಕಾ ಕಾರ್ಡ್‌ಗಳನ್ನು ನೀಡಿ ಕಲಿಸಲಾಗುತ್ತಿದೆ.

ಸದ್ಯ ವಿದ್ಯಾಗಮ ತರಗತಿಗಳು ಸಮುದಾಯ ಭವನ, ದೇವಾಲಯ, ಬಯಲು, ವಠಾರಗಳಲ್ಲಿ ನಡೆಯುತ್ತಿವೆ. ಇಲ್ಲಿ ಅಗತ್ಯ ಕಲಿಕಾ ಸಾಮಾಗ್ರಿಗಳಾದ ಕಪ್ಪುಹಲಗೆ, ಸೀಮೆಸುಣ್ಣ, ಡಸ್ಟರ್, ಚಾರ್ಟ್ ಬಳಸಿ ಕಲಿಸಲು ಕಷ್ಟವಾಗುತ್ತಿದೆ. ಸಾಮಾನ್ಯವಾಗಿ ಶಿಕ್ಷಕರು ಕನಿಷ್ಠ ಎರಡು ಕಲಿಕಾ ಸಾಮಾಗ್ರಿಗಳನ್ನಾದರೂ ಬಳಸಿ ಪಾಠ ಮಾಡಬೇಕು. ವಿದ್ಯಾಗಮ ತರಗತಿಯಲ್ಲಿ ಮೊಬೈಲ್‌ ಇಲ್ಲದ ಮಕ್ಕಳಿಗೆ ಈ ಕಲಿಕಾ ಕಾರ್ಡ್‌ಗಳೇ ಮುಖ್ಯ ಕಲಿಕಾ ಸಾಮಗ್ರಿ ಆಗಿದೆ.

ಮುಳ್ಳೂರು ಗ್ರಾಮದ ಅಯ್ಯಪ್ಪ ದೇವಾಲಯದ ವಿಶಾಲ ಆವರಣವನ್ನೇ ಶಿಕ್ಷಕ ಸತೀಶ್‌ ವರು ಶಾಲೆಯಾಗಿ ಪರಿವರ್ತಿಸಿದ್ದಾರೆ. ಹಳೆಯ ತಗಡಿನ ಶೀಟ್‌ಗೆ ಕಪ್ಪು ಬಣ್ಣ ಬಳಿದು, ಅದನ್ನೇ ಕಪ್ಪು ಹಲಗೆಯಾಗಿ ಬಳಸುತ್ತಿದ್ದಾರೆ. ಮಕ್ಕಳು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಅಂತರ ಕಾಯ್ದುಕೊಂಡು ಅಭ್ಯಾಸ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ನೆರಳಿಗಾಗಿ ಶೆಡ್ ನೆಟ್ ಅಳವಡಿಸಲಾಗಿದೆ. ಕೂರಲು ಚಾಪೆಗಳನ್ನು ಬಳಸಿದ್ದಾರೆ. ಇದರಿಂದ ಇದು ಗುರುಕುಲ ಮಾದರಿ ಶಿಕ್ಷಣದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT