ಬುಧವಾರ, ಏಪ್ರಿಲ್ 14, 2021
30 °C

ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇದೇ ತಿಂಗಳ 10ರಿಂದ  ಹುಬ್ಬಳ್ಳಿ– ಬೆಂಗಳೂರು ಹಾಗೂ 11ರಿಂದ ಬೆಂಗಳೂರು– ಹೊಸಪೇಟೆಗೆ ಪ್ರತಿನಿತ್ಯ ಸಾಮಾನ್ಯ ದರದಲ್ಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಆರಂಭಿಸಲಿದೆ. ಮುಂದಿನ ಆದೇಶದವರೆಗೆ ಈ ರೈಲುಗಳ ಸಂಚಾರ ಮುಂದುವರಿಯಲಿವೆ.

ಮಾ.10ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಮರುದಿನ ಬೆಳಿಗ್ಗೆ 4ಕ್ಕೆ ಬೆಂಗಳೂರು ತಲುಪಲಿದೆ. ಮಾ.12ರಂದು ಬೆಂಗಳೂರಿನಿಂದ ರಾತ್ರಿ 11.55ಕ್ಕೆ ಹೊರಡುವ ರೈಲು ಹುಬ್ಬಳ್ಳಿಗೆ ಮರುದಿನ ಬೆಳಿಗ್ಗೆ 10 ಗಂಟೆಗೆ ತಲುಪಿದೆ. ನಂತರ ಪ್ರತಿದಿನ ಇದೇ ಸಮಯಕ್ಕೆ ರೈಲು ಸಂಚರಿಸಲಿವೆ. 

ಮಾ.11ರಂದು ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 3.45ಕ್ಕೆ ಹೊಸಪೇಟೆಗೆ ತಲುಪಲಿದೆ. ಮಾ.12ರಂದು ಮಧ್ಯಾಹ್ನ 12.10ಕ್ಕೆ  ಹೊಸಪೇಟೆಯಿಂದ ಹೊರಡುವ ರೈಲು ಬೆಂಗಳೂರಿಗೆ ರಾತ್ರಿ 10.45ಕ್ಕೆ ತಲುಪಲಿದೆ. ನಂತರ ಪ್ರತಿದಿನ ರೈಲು ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.  

11ರಿಂದ ಹೊಸಪೇಟೆ–ಹರಿಹರ ನಡುವೆ ರೈಲು: ನೈರುತ್ಯ ರೈಲ್ವೆಯು ಹೊಸಪೇಟೆ–ಹರಿಹರ ನಡುವೆ ನಿತ್ಯ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಆರಂಭಿಸಲಿದೆ.

ಮಾ. 11ರಿಂದ ಮುಂದಿನ ಆದೇಶದ ತನಕ ಹೊಸಪೇಟೆಯಿಂದ ಸಂಜೆ 4 ಗಂಟೆಗೆ ಹೊರಡುವ ರೈಲು ರಾತ್ರಿ 9.15ಕ್ಕೆ ಹರಿಹರಕ್ಕೆ ತಲುಪಲಿದೆ. ಈ ರೈಲು ತುಂಗಭದ್ರಾ ಡ್ಯಾಂ, ವ್ಯಾಸನಕೇರಿ, ವ್ಯಾಸ ಕಾಲೊನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಮಳವಿ, ಕೊಟ್ಟೂರು, ಬೆಣ್ಣೆಹಳ್ಳಿ, ಹರಪನಹಳ್ಳಿ, ತೆಲಿಗಿ, ಅಮರಾವತಿ ಕಾಲೊನಿ, ದಾವಣಗೆರೆ, ತೋಳಹುಣಸೆ, ದಾವಣಗೆರೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಮಾ. 12ರಿಂದ ಹರಿಹರದಿಂದ ಬೆಳಿಗ್ಗೆ 6 ಗಂಟೆಗೆ ಹೊರಡುವ ರೈಲು 11.45ಕ್ಕೆ ಹೊಸಪೇಟೆಗೆ ಬರಲಿದೆ. ಈ ರೈಲುಗಳಿಗೆ ಸೀಟು ಕಾಯ್ದಿರಿಸಬೇಕಾದ ಅಗತ್ಯವಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು