ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಮೌಲ್ಯಮಾಪಕರ ಸಂಭಾವನೆ ಹೆಚ್ಚಳ

Last Updated 14 ಏಪ್ರಿಲ್ 2022, 18:48 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಭತ್ಯೆ ಯನ್ನು ಹೆಚ್ಚಿಸಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.

ಭತ್ಯೆ ಪರಿಷ್ಕರಣೆಯಿಂದಾಗಿ ಮೌಲ್ಯ ಮಾಪನ ಕೇಂದ್ರಗಳ ಜಂಟಿ ಮುಖ್ಯ ಪರೀಕ್ಷಕರ ಸಂಭಾವನೆ ₹ 6,924ರಿಂದ ₹ 7,270, ಉಪ ಮುಖ್ಯ ಪರೀಕ್ಷಕರ ಸಂಭಾವನೆ ₹ 5,204ರಿಂದ ₹ 5,464ಗೆ ಹೆಚ್ಚಳ ಆಗಲಿದೆ.

ಮೌಲ್ಯಮಾಪಕರಿಗೆ ಪ್ರತಿ ಉತ್ತರ ಪತ್ರಿಕೆಯ ಮೌಲ್ಯಮಾಪನ ದರವನ್ನು
₹ 1 ಹೆಚ್ಚಿಸಲಾಗಿದೆ. ಇದರಿಂದ ₹ 22 ಇದ್ದ ಪ್ರಥಮ ಭಾಷೆ ಪತ್ರಿಕೆಯ ಮೌಲ್ಯ ಮಾಪನ ದರ ₹ 23, ದ್ವಿತೀಯ, ತೃತೀಯ ಭಾಷೆ ಮತ್ತು ಐಚ್ಛಿಕ ವಿಷಯ ಗಳಿಗೆ ₹ 20 ಇದ್ದ ಪ್ರತಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದರ ₹ 21ಗೆ ಹೆಚ್ಚಿಸಲಾಗಿದೆ.

ಭತ್ಯೆ ಬೆಂಗಳೂರಿನಲ್ಲಿ ₹ 596 (ಹಿಂದಿನ ದರ ₹ 568) ಹಾಗೂ ಇತರ ನಗರಗಳಲ್ಲಿ ₹ 469 (ಹಿಂದಿನ ದರ₹ 447), ಸ್ಥಳೀಯ ಭತ್ಯೆ ಬೆಂಗಳೂರಿಗೆ ₹ 224 (ಹಿಂದಿನ ದರ ₹ 224), ಇತರ ನಗರಗಳಲ್ಲಿ ಸ್ಥಳೀಯ ಭತ್ಯೆಯನ್ನು ₹ 189 (ಹಿಂದಿನ ದರ ₹ 180) ಹೆಚ್ಚಳ ಮಾಡಲಾಗಿದೆ.

ಕ್ಯಾಂಪ್‌ ಕಸ್ಟೋಡಿಯನ್‌ ಸಂಭಾವನೆ ₹ 4,515 (ಹಿಂದಿನ ದರ ₹ 4,300), ಕ್ಯಾಂಪ್‌ ಸಹಾಯಕರ ಸಂಭಾವನೆ ₹ 1,260 (ಹಿಂದಿನ ದರ ₹ 1,200), ‘ಡಿ’ ದರ್ಜೆ ನೌಕರರ ಸಂಭಾವನೆ ₹ 630 (ಹಿಂದಿನ ದರ ₹ 600) ಆಗಿ ಹೆಚ್ಚಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT